2020ರ ಐಪಿಎಲ್‍ನಿಂದ ದೂರವಾದ ರೈನಾಗೆ ಎಷ್ಟು ಕೋಟಿ ನಷ್ಟ?

ಮುಂಬೈ: ವೈಯಕ್ತಿಕ ಕಾರಣದಿಂದ ಐಪಿಎಲ್ 2020ರ ಆವೃತ್ತಿಯಿಂದ ಹೊರ ನಡೆದಿರುವ ಚೆನ್ನೈ ಸೂಪರ್ ಕಿಂಗ್ಸ್ ಉಪನಾಯಕ ಸುರೇಶ್ ರೈನಾ ಭಾರೀ ನಷ್ಟವನ್ನು ಎದುರಿಸಲಿದ್ದಾರೆ.

ಸೆ.19ರಿಂದ ಯುಎಇನಲ್ಲಿ ಐಪಿಎಲ್ 2020 ಆವೃತ್ತಿಯ ಪಂದ್ಯಗಳು ಆರಂಭವಾಗಲಿದೆ. ಈ ನಡುವೆ ಆಗಸ್ಟ್ 21ರಂದು ರೈನಾ ಭಾರತಕ್ಕೆ ಹಿಂದುರುಗಿದ್ದರು. ಇದರ ನಡುವೆಯೇ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ 12 ಮಂದಿಗೆ ಕೊರೊನಾ ಪಾಸಿಟಿವ್ ದೃಢವಾಗಿತ್ತು. ಇತ್ತ ಇಂದು ತಮ್ಮ ಐಪಿಎಲ್ ತೊರೆಯುವ ನಿರ್ಧಾರದ ಕುರಿತು ಮೌನ ಮುರಿದಿದ್ದ ರೈನಾ, ಪಂಜಾಬ್‍ನಲ್ಲಿ ತಮ್ಮ ಕುಟುಂಬ ಮೇಲಾಗಿದ್ದ ಭಯಾನಕ ಘಟನೆಯ ಮಾಹಿತಿ ಬಿಚ್ಚಿಟ್ಟರು. ಇದನ್ನೂ ಓದಿ: ನನ್ನ ಸೋದರ ಮಾವನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ: ಸುರೇಶ್ ರೈನಾ

ಐಪಿಎಲ್ 2020ರ ಆವೃತ್ತಿಯಿಂದ ರೈನಾ ದೂರವಾದ ಹಿನ್ನೆಲೆಯಲ್ಲಿ ಕೋಟಿ ಲೆಕ್ಕದಲ್ಲಿ ನಷ್ಟ ಅನುಭವಿಸಲಿದ್ದಾರೆ. 2008ರ ಐಪಿಎಲ್ ಮೊದಲ ಆವೃತ್ತಿಯಲ್ಲಿ ರೈನಾರನ್ನು 4 ಕೋಟಿ ರೂ.ಗಳಿಗೆ ಖರೀದಿ ಮಾಡಿತ್ತು. 2018ರ ಆವೃತ್ತಿಯಿಂದ 11 ಕೋಟಿ ರೂ.ಗಳನ್ನು ನೀಡುತ್ತಿತ್ತು. ಸದ್ಯ ಸಂಪೂರ್ಣ ಟೂರ್ನಿಗೆ ರೈನಾ ಅಲಭ್ಯರಾಗಿರುವ ಹಿನ್ನೆಲೆಯಲ್ಲಿ ಫ್ರಾಂಚೈಸಿ ನೀಡುವ 11 ಕೋಟಿ ರೂ.ಗಳೊಂದಿಗೆ ಮ್ಯಾನ್ ಅಫ್ ದಿ ಮ್ಯಾಚ್, ಬೆಸ್ಟ್ ಕ್ಯಾಚ್ ಸೇರಿದಂತೆ ನೀಡುವ ಹಲವು ಅವಾರ್ಡ್‍ಗಳ ಮೊತ್ತವನ್ನು ಕಳೆದುಕೊಳ್ಳಲಿದ್ದಾರೆ. ಸರಿ ಸುಮಾರು ರೈನಾ ಅವರಿಗೆ 15 ಕೋಟಿ ರೂ. ನಷ್ಟ ಎದುರಾಗಲಿದೆ ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: ಐಪಿಎಲ್ ಶೆಡ್ಯೂಲ್‍ನಲ್ಲಿ ಬದಲಾವಣೆ- ಮೊದಲ ಪಂದ್ಯದಿಂದ ಚೆನ್ನೈ ಔಟ್

ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ನಾಯಕ ಧೋನಿ ಬಳಿಕ ರೈನಾ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿದ್ದರು. ಅಲ್ಲದೇ ತಂಡದ ಉಪನಾಯಕನಾಗಿಯೂ ಸ್ಥಾನ ಪಡೆದಿದ್ದರು. ಸದ್ಯ ರೈನಾ ಟೂರ್ನಿಯಿಂದ ದೂರವಾಗಿರುವ ಕುರಿತು ಹಲವು ವರದಿಗಳು ಪ್ರಕಟವಾಗುತ್ತಿದ್ದು, ಈ ಎಲ್ಲಾ ವರದಿಗಳನ್ನು ಅಲ್ಲಗೆಳೆದಿರುವ ಚೆನ್ನೈ ಫ್ರಾಂಚೈಸಿ ರೈನಾ ಪರ ಯಾವಾಗಲೂ ನಿಲ್ಲುವುದಾಗಿ ಹೇಳಿದೆ. ಅಲ್ಲದೇ ನಾವು ಕಳೆದ ಒಂದು ದಶಕದಿಂದ ಎಲ್ಲಾ ಆಟಗಾರರು ಒಂದೇ ಕುಟುಂಬವಾಗಿದ್ದೇವೆ ಎಂದು ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಚೆನ್ನೈ ಯಾವಾಗಲೂ ರೈನಾರೊಂದಿಗೆ ನಿಲ್ಲುತ್ತದೆ- ಶ್ರೀನಿವಾಸನ್ ಯೂಟರ್ನ್

Comments

Leave a Reply

Your email address will not be published. Required fields are marked *