ಗ್ರಾಹಕರಿಗೆ ಅಂಗೈಯಲ್ಲಿ ಚಂದ್ರ ತೋರಿಸಿ 200 ಕೋಟಿ ರೂ.ಗೂ ಅಧಿಕ ಉಂಡೆನಾಮ ಹಾಕಿದ ಕಂಪನಿ

ಬೆಂಗಳೂರು: ಅಂಗೈಯಲ್ಲಿ ಚಂದ್ರ ತೋರಿಸಿ ಚಿಟ್‍ಫಂಡ್ ಕಂಪನಿಯೊಂದು ನೂರಾರು ಗ್ರಾಹಕರಿಗೆ ಕೋಟ್ಯಾಂತರ ರೂಪಾಯಿ ಉಂಡೆನಾಮ ಹಾಕಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ಗ್ರಾಹಕರಿಗೆ ಕಾಗಕ್ಕ ಗುಬ್ಬಕ್ಕನ ಕಥೆ ಹೇಳಿ ನಂಬಿಸಿದ ತಮಿಳುನಾಡು ಮೂಲದ ತ್ರಿಪುತ ಚಿಟ್‍ಫಂಡ್ ಕಂಪನಿ ಸಾಕಷ್ಟು ಜನರಿಗೆ ವಂಚಿಸಿದೆ. ಬೆಂಗಳೂರಿನಲ್ಲಿಯೇ ಸುಮಾರು 200 ಕೋಟಿ ರೂ. ಗೂ ಅಧಿಕ ಹಣ ಹಾಕಿಸಿಕೊಂಡು ನುಂಗಿ ಹಾಕಿದೆ ಎಂದು ವಂಚನೆಗೊಳಗಾದ ಗ್ರಾಹಕರು ಆರೋಪಿಸುತ್ತಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರಂ, ಬಾಣಸವಾಡಿ, ದಾಸರಹಳ್ಳಿ, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ನಗರದಲ್ಲಿ ಕಂಪನಿಯ ಒಟ್ಟು 13 ಶಾಖೆಗಳಿದ್ದವು. ಆರು ತಿಂಗಳಲ್ಲಿ ನೀವು ಹಾಕುವ ಹಣಕ್ಕೆ ದುಪ್ಪಟ್ಟು ಹಣ ಕೊಡುವುದಾಗಿ ನಂಬಿಸಿ ಮೊಸ ಮಾಡಿದೆ.

ಪ್ರತಿ ತಿಂಗಳು ಗ್ರಾಹಕರ ಮನೆಗೆ ಹೋಗಿ ಚಿಟ್‍ಫಂಡ್ ಸಿಬ್ಬಂದಿ ಹಣ ಪಡೆಯುತ್ತಿದ್ದರು. ಹಣ ಕಟ್ಟಿದ ಜನರಿಗೆ ಕಟ್ಟಿದ ಹಣಕ್ಕೆ ಮೂರು-ನಾಲ್ಕು ಬಾರಿ ಹಣ ಮರು ಪಾವತಿಸಿ ಗ್ರಾಹಕರ ನಂಬಿಕೆಗೆ ಪಾತ್ರರಾಗಿದ್ದರೆ. ಆಗ ಜನರು ನಂಬಿ ದುಪ್ಪಟ್ಟು ಹಣ ಇನ್ವೆಸ್ಟ್ ಮಾಡಲು ಮುಂದಾಗಿದ್ದಾರೆ. ಬಳಿಕ ಜನರು ಹಣ ಇನ್ವೆಸ್ಟ್ ಮಾಡಿದ ನಂತರ ಕಂಪನಿಯವರು ಇದ್ದಕ್ಕಿದಂತೆ ರಾತ್ರೋರಾತ್ರಿ ಅಷ್ಟೂ ಬ್ರಾಂಚ್‍ಗಳಿಗೆ ಬೀಗ ಜಡಿಯಲಾಗಿದೆ.

ಚಿಟ್‍ಫಂಡ್ ಕಂಪನಿ ಮುಚ್ಚಿಕೊಂಡಿದ್ದರಿಂದ ದುಪ್ಪಟ್ಟು ಹಣದಾಸೆಗೆ ಲಕ್ಷಾಂತರ ರೂಪಾಯಿ ಹಾಕಿದ್ದ ಜನರು ಈಗ ಕಂಗಾಲಾಗಿದ್ದಾರೆ. ಈ ಬಗ್ಗೆ ಠಾಣೆಗೆ ದೂರು ನೀಡಲು ಹೋದರೆ ನನ್ನ ವ್ಯಾಪ್ತಿಗೆ ಬರಲ್ಲ ಅಂತಾ ಪೊಲೀಸಲು ಹೇಳಿ ಕಳುಹಿಸುತ್ತಿದ್ದು, ಏನು ಪ್ರಯೋಜನವಾಗಲಿಲ್ಲ. ಆದ್ದರಿಂದ ವಂಚಿತರು ದಿಕ್ಕು ತೋಚದೆ ನಗರ ಪೊಲೀಸ್ ಆಯುಕ್ತರ ಮೊರೆ ಹೋಗಿದ್ದಾರೆ.

Comments

Leave a Reply

Your email address will not be published. Required fields are marked *