20 ದೇಶಗಳಲ್ಲಿ 200 ಮಂಕಿಪಾಕ್ಸ್ ಪ್ರಕರಣ: ಡಬ್ಲ್ಯೂಹೆಚ್‌ಒ

MONKEY (1)

ಬರ್ನ್: ಕೊರೊನಾ ಬಳಿಕ ಇದೀಗ ಮಂಕಿಪಾಕ್ಸ್ ವೈರಸ್ ವಿಶ್ವದಾದ್ಯಂತ ಆತಂಕ ಮೂಡಿಸುತ್ತಿದೆ. ಈಗಾಗಲೇ ಮಂಕಿಪಾಕ್ಸ್ 20 ಕ್ಕೂ ಹೆಚ್ಚು ದೇಶಗಳಿಗೆ ಹರಡಿದ್ದು, ಸುಮಾರು 200 ಪ್ರಕರಣಗಳು ದೃಢಪಟ್ಟಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಹೆಚ್‌ಒ) ಶುಕ್ರವಾರ ತಿಳಿಸಿದೆ.

ಮಂಕಿಪಾಕ್ಸ್ ವೈರಸ್ ದಂಶಕಗಳು ಹಾಗೂ ಮಂಗಗಳಂತಹ ಕಾಡು ಪ್ರಾಣಿಗಳಲ್ಲಿ ಹುಟ್ಟುತ್ತದೆ. ಸಾಂದರ್ಭಿಕವಾಗಿ ಜನರಿಗೂ ಹರಡುವ ವೈರಸ್, ಸಿಡುಬಿನ ಜಾತಿಗೆ ಸೇರುತ್ತದೆ. ಇದನ್ನೂ ಓದಿ: ಸೊಳ್ಳೆ ಉತ್ಪಾದನೆಗೆ ಕಾರಣವಾಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ – 50 ಸಾವಿರ ರೂ. ದಂಡ ವಿಧಿಸಿ: ಡೆಲ್ಲಿ ಹೈಕೋರ್ಟ್

ಮಧ್ಯ ಹಾಗೂ ಪಶ್ಚಿಮ ಆಫ್ರಿಕಾದಲ್ಲಿ ಮಂಕಿಪಾಕ್ಸ್ ಪ್ರಕರಣಗಳು ಹೆಚ್ಚಾಗಿ ಕಂಡುಬಂದಿದೆ. 1958ರಲ್ಲಿ ಇದನ್ನು ಮೊದಲ ಬಾರಿಗೆ ಮಂಗಗಳಲ್ಲಿ ಕಂಡುಹಿಡಿಯಲಾಗಿತ್ತು. ಹೀಗಾಗಿ ಇದಕ್ಕೆ ಮಂಕಿಪಾಕ್ಸ್ ಎಂದು ಹೆಸರಿಡಲಾಗಿದೆ. 1970ರಲ್ಲಿ ಮೊದಲ ಬಾರಿಗೆ ಕಾಂಗೋದ ಬಾಲಕನಲ್ಲಿ ರೋಗ ಪತ್ತೆಯಾಗಿತ್ತು. ಇದನ್ನೂ ಓದಿ: ಮಂಕಿಪಾಕ್ಸ್ ಆತಂಕ – ಬೆಂಗಳೂರಿನಲ್ಲಿ ಹೈ ಅಲರ್ಟ್

ಕೋವಿಡ್ 4ನೇ ಅಲೆಯ ಭೀತಿಯಲ್ಲಿರುವ ಭಾರತಕ್ಕೂ ಮಂಕಿಪಾಕ್ಸ್ ಆತಂಕ ಶುರುವಾಗಿದೆ. ವೈರಸ್ ದೇಶದೊಳಗೆ ನುಸುಳದಂತೆ ತಡೆಗಟ್ಟಲು ಅಂತರಾಷ್ಟ್ರೀಯ ಪ್ರವೇಶ ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಸದ್ಯ ಮಂಕಿಪಾಕ್ಸ್ ವೈರಸ್ ಜನರಲ್ಲಿ ಅಷ್ಟು ಸುಲಭವಾಗಿ ಹರಡುವುದಿಲ್ಲ. ಹರಡಿದರೂ ಇದನ್ನು ಕೆಲವೇ ವಾರಗಳಲ್ಲಿ ಗುಣಪಡಿಸಬಹುದು. ಸಾರ್ವಜನಿಕರಲ್ಲಿ ವ್ಯಾಪಕವಾಗಿ ಹರಡುವ ಅಪಾಯ ಬಹಳ ಕಡಿಮೆ ಎಂದು ವರದಿಗಳು ತಿಳಿಸಿವೆ.

Comments

Leave a Reply

Your email address will not be published. Required fields are marked *