20ರ ನಂತರವೂ ಕರ್ಫ್ಯೂ ವಿಸ್ತರಣೆಯ ಬಗ್ಗೆ ಶೀಘ್ರ ನಿರ್ಧಾರ: ಬಿಎಸ್‍ವೈ

– ಪಬ್ಲಿಕ್ ಟಿವಿ ವರದಿ ಪ್ರಸ್ತಾಪಿಸಿದ ಸಿಎಂ

ಬೆಂಗಳೂರು: ಏಪ್ರಿಲ್ 20ರವರೆಗೆ ಈಗಾಗಲೇ ಕರ್ಫ್ಯೂ ಜಾರಿಗೊಳಿಸಲಾಗಿದ್ದು, ಆ ಬಳಿಕ ಮತ್ತೊಮ್ಮೆ ಅಧಿಕಾರಿಗಳ ಜೊತೆ ಕುಳೀತು ಚರ್ಚೆಸಿ ನಿರ್ಧಾರಕ್ಕೆ ಬರಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದರು.

ಕೋವಿಡ್ ಪರಿಸ್ಥಿತಿ ಕೈ ಮೀರುತ್ತಿರುವ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಸಿಎಂ ಕಾವೇರಿ ನಿವಾಸದಲ್ಲಿ ಉನ್ನತ ಮಟ್ಟದ ತುರ್ತು ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 4-5 ಜಿಲ್ಲಾ ಕೇಂದ್ರಗಳಲ್ಲಿ ಕರ್ಫ್ಯೂ ಜಾರಿಗೆ ತರುವ ಬಗ್ಗೆ ಚರ್ಚೆ ನಡೆಸುತ್ತೇವೆ. ಇಂದಿನ ಸಭೆಯಲ್ಲಿ ಯಾವುದೇ ರೀತಿಯ ತೀರ್ಮಾನವಾಗಿಲ್ಲ. ಈ ವಾರ ಆದ ಬಳಿಕ ಅಧಿಕಾರಿಗಳ ಜೊತೆ ಕೂತು ಚರ್ಚೆ ಮಾಡುತ್ತೇವೆ. ಪ್ರಧಾನಿ ಸಲಹೆ ಹಾಗೂ ಬೇರೆ ಬೇರೆ ರಾಜ್ಯಗಳ ಸಲಹೆ ಪಡೆದು ಅಂತಿಮ ತೀರ್ಮಾನಕ್ಕೆ ಬರುತ್ತೇವೆ ಎಂದರು.

ಸದ್ಯ 20ರ ವರೆಗೆ ನೈಟ್ ಕರ್ಫ್ಯೂ ಇದ್ದು, 20 ನಂತರ ನಂತರ ಮತ್ತೆ ಕೂತು ಚರ್ಚೆಸಿ ಕರ್ಫ್ಯೂ ಬಗ್ಗೆ ತೀರ್ಮಾನ ಮಾಡುತ್ತೇವೆ. ಬೇರೆ ರಾಜ್ಯಗಳಿಗೆ ನಮ್ಮ ರಾಜ್ಯವನ್ನು ಹೋಲಿಕೆ ಮಾಡಬೇಡಿ. ಏಪ್ರಿಲ್ 20ರವರೆಗೆ ಯಾವುದೇ ಬದಲಾವಣೆ ಇಲ್ಲ. ನಂತರ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಸಿಎಂ ಸ್ಪಷ್ಟಪಡಿಸಿದರು.

ಸಭೆಯಲ್ಲಿ ಬಿಬಿಎಂಪಿ ಕಮಿಷನರ್ ಗೌರವ್ ಗುಪ್ತಾ ಅವರನ್ನು ಸಿಎಂ ತರಾಟೆಗೆ ತೆಗೆದುಕೊಂಡಿದ್ದಾರೆ. ಪಬ್ಲಿಕ್ ಟಿವಿಯಲ್ಲಿ ಪ್ರಸಾರವಾಗಿದ್ದ ಅಂತ್ಯಕ್ರಿಯೆಗೂ ಪ್ಯಾಕೇಜ್ ಫಿಕ್ಸ್ ಮಾಡಿದ್ದ ವರದಿ ಬಗ್ಗೆ ಪ್ರಸ್ತಾಪಿಸಿದ ಸಿಎಂ, ಏನ್ರೀ ಮಾಡ್ತಾ ಇದ್ದೀರಾ..!? ಪಬ್ಲಿಕ್ ಟಿವಿಯಲ್ಲಿ ವರದಿ ನೋಡಿದ್ರಾ..!?, ಆ ಬಗ್ಗೆ ಕಠಿಣ ಕ್ರಮ ಆಗಬೇಕು. ಆ ವಿಚಾರದಲ್ಲಿ ಜನ ನಮ್ಮನ್ನ ಕ್ಷಮಿಸೋದಿಲ್ಲ. ನಾನು ನಿಮ್ಮನ್ನ ಕ್ಷಮಿಸೋದಿಲ್ಲ ಎಂದು ಗರಂ ಆದರು.

ಇದೇ ವೇಳೆ ಸುಧಾಕರ್ ಗೂ ಸೂಚನೆ ಕೊಟ್ಟ ಸಿಎಂ ಯಡಿಯೂರಪ್ಪ, ಯಾವುದನ್ನಾದ್ರೂ ಸಹಿಸ್ಕೋಬಹುದು ಸುಧಾಕರ್. ಆದಷ್ಟು ಬೇಗ ಸರಿಪಡಿಸಿ ಎಂದು ತಾಕೀತು ಮಾಡಿದರು.

Comments

Leave a Reply

Your email address will not be published. Required fields are marked *