2ರ ಕಂದಮ್ಮನನ್ನು ಕಿಡ್ನಾಪ್‍ಗೈದು ರೇಪ್ ಮಾಡಿ ರೈಲ್ವೇ ಹಳಿ ಬಳಿ ಬಿಸಾಕ್ದ!

– ಪೊಲೀಸರಿಂದ ಪುಟಾಣಿಯ ರಕ್ಷಣೆ

ನವದೆಹಲಿ: ಫುಟ್ ಪಾತ್ ನಲ್ಲಿ ತಾಯಿ ಜೊತೆ ಮಲಗಿದ್ದ 2 ವರ್ಷದ ಪುಟ್ಟ ಕಂದಮ್ಮನನ್ನು ಯುವಕನೊಬ್ಬ ಕಿಡ್ನಾಪ್ ಮಾಡಿ, ಅತ್ಯಾಚಾರವೆಸಗಿ ಬಳಿಕ ರೈಲ್ವೇ ಟ್ರ್ಯಾಕ್ ಬಳಿ ಎಸೆದು ಹೋದ ಹೃದಯವಿದ್ರಾವಕ ಘಟನೆಯೊಂದು ನವದೆಹಲಿಯಲ್ಲಿ ನಡೆದಿದೆ.

ಈ ಘಟನೆ ದೆಹಲಿಯ ಹಳೇ ರೈಲ್ವೇ ನಿಲ್ದಾಣದಲ್ಲಿ ಶನಿವಾರ ನಸುಕಿನ ಜಾವ ನಡೆದಿದ್ದು, ಇಂದು ಬೆಳಗ್ಗೆ ಆರೋಪಿಯನ್ನು ಬಂಧಿಸಿದ್ದಾರೆ. 24 ವರ್ಷದ ಅನಿಲ್ ಬಂಧಿತ ಆರೋಪಿಯಾಗಿದ್ದು, ಈತ ಡ್ರಗ್ ವ್ಯಸನಿಯಾಗಿದ್ದಾನೆ ಎನ್ನುವುದು ತಿಳಿದುಬಂದಿದೆ.

ಘಟನೆ ವಿವರ:
ಉತ್ತರ ದೆಹಲಿಯ ಕಾಟ್ ವಾಲಿ ಪ್ರದೇಶದ ಫುಟ್ ಪಾತ್ ನಲ್ಲಿ ಶುಕ್ರವಾರ ರಾತ್ರಿ ಕಂದಮ್ಮ ತನ್ನ ತಾಯಿ ಜೊತೆ ಮಲಗಿದ್ದಳು. ಆದ್ರೆ ನಸುಕಿನ ಜಾವ 2.30ರ ಸುಮಾರಿಗೆ ಕಂದಮ್ಮ ತನ್ನ ಬಳಿ ಇಲ್ಲದಿರುವುದನ್ನು ತಾಯಿ ಗಮನಿಸಿದ್ದಾರೆ. ಅಲ್ಲದೇ ಎಲ್ಲಾ ಕಡೆ ಹುಡುಕಾಡಿದ್ದಾರೆ.

ಈ ವೇಳೆ ಮಗಳು ಇಲ್ಲದಿರುವುದನ್ನು ಮನಗಂಡ ತಾಯಿ ಶನಿವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಮಗಳು ಕಾಣದಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಕಂದಮ್ಮ ನಾಪತ್ತೆ ದೂರು ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮಹಿಳೆಯ ದೂರಿನಂತೆ ಕಂದಮ್ಮನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಮಧ್ಯಾಹ್ನ ಸುಮಾರಿಗೆ ಕೇಂದ್ರ ದೆಹಲಿಯ ಆಸ್ಪತ್ರೆಯೊಂದರಲ್ಲಿ ಕಂದಮ್ಮ ದಾಖಲಾಗಿರುವ ಕುರಿತು ಪೊಲೀಸರಿಗೆ ಮಾಹಿತಿ ಲಭಿಸಿದೆ. ಆ ಕಂದಮ್ಮನನ್ನು ಕಾಟ್ ವಾಲಿ ಪ್ರದೇಶದ ನಿವಾಸಿ ಎಂಬುದಾಗಿ ಗುರುತಿಸಲಾಗಿತ್ತು ಅಂತ ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.

ಅಲ್ಲದೇ ಕಂದಮ್ಮನ ಮೇಲೆ ಲೈಂಗಿಕ ದೌರ್ಜನ್ಯವೆಸಗಲಾಗಿದ್ದು, ಬಳಿಕ ಆಕೆಯನ್ನು ಕಿಡಿಗೇಡಿಗಳು ರೈಲ್ವೇ ಟ್ರ್ಯಾಕ್ ಬಳಿ ಬಿಸಾಕಿ ಹೋಗಿದ್ದರು. ಇದನ್ನು ಗಮನಿಸಿದ ಅಲ್ಲಿನ ಪೊಲೀಸರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಕಂದಮ್ಮನಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯವಾಗಿದ್ದಾಳೆ ಅಂತ ಪೊಲೀಸರು ತಿಳಿಸಿದ್ದಾರೆ.

ಘಟನೆ ನಡೆದ ಸ್ಥಳೀಯ ಸಿಸಿಟಿವಿಗಳನ್ನು ಪರಿಶೀಲಿಸಿದ ಪೊಲೀಸರು ಆರೋಪಿಗಾಗಿ ಬಲೆ ಬೀಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಈ ಹಿಂದೆ ಹರಿದ್ವಾರದಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದನು ಎಂಬುದಾಗಿ ವರದಿಯಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Comments

Leave a Reply

Your email address will not be published. Required fields are marked *