ಹಿಜಬ್ ಬಗ್ಗೆ ಆಕ್ಷೇಪಾರ್ಹ ಪೋಸ್ಟ್ – ಇಬ್ಬರು ಪೊಲೀಸರು ಅಮಾನತು

ಜೈಪುರ: ಹಿಜಬ್‍ಗೆ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯಾದಲ್ಲಿ ಆಕ್ಷೇಪಾರ್ಹ ಪೋಸ್ಟ್ ಮಾಡಿದ ಆರೋಪದ ಮೇಲೆ ರಾಜಸ್ಥಾನ ಪೊಲೀಸ್ ಪೇದೆ ಮತ್ತು ಟ್ರಾಫಿಕ್ ಪೊಲೀಸ್ ಸಹಾಯಕ ಸಬ್ ಇನ್ಸ್‍ಪೆಕ್ಟರ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ.

ಜವಾಹರ್ ಸರ್ಕಲ್ ಪೊಲೀಸ್ ಠಾಣೆಯಲ್ಲಿ ಕಾನ್‍ಸ್ಟೆಬಲ್ ರಮೇಶ್ ಅವರು ಹಿಜಬ್‍ಗೆ ಸಂಬಂಧಿಸಿದಂತೆ ಆಕ್ಷೇಪಾರ್ಹ ಪೋಸ್ಟ್ ಹಂಚಿಕೊಂಡಿದ್ದಾರೆ. ಟ್ರಾಫಿಕ್ ಪೊಲೀಸ್ ಎಎಸ್‍ಐ ಸತ್ವೀರ್ ಸಿಂಗ್ ಅದನ್ನು ಬೇರೆ ಅವರಿಗೂ ಶೇರ್ ಮಾಡಿದ್ದರು ಎಂದು ಆರೋಪ ಕೇಳಿಬರುತ್ತಿತ್ತು.

ಸಮಾನತೆ, ಶಾಂತಿ ಕಾಪಾಡಬೇಕಾದ ಪೊಲೀಸರೇ ಕೋಮು ಗಲಭೆ ಸೃಷ್ಟಿಸಲು ಪ್ರಯತ್ನಿಸುತ್ತಿರುವುದು ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ಬಂದಿದೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಷೇಪಾರ್ಹ ಫೋಟೋ ಹಂಚಿಕೊಂಡಿದ್ದು, ಕಮೆಂಟ್ ಮಾಡಿದ್ದಕ್ಕಾಗಿ ಇಬ್ಬರು ಪೊಲೀಸರನ್ನು ಶುಕ್ರವಾರ ಅಮಾನತುಗೊಳಿಸಲಾಗಿದೆ. ಪೊಲೀಸ್ ಅಧಿಕಾರಿಗಳಾಗಿದ್ದು, ಅವರೇ ಹೀಗೆ ಮಾಡಿರುವುದು ಅಪರಾಧವಾಗಿದೆ. ಅದಕ್ಕೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ಅನಿಲ್ ಪ್ಯಾರಿಸ್ ದೇಶಮುಖ ಹೇಳಿದರು. ಇದನ್ನೂ ಓದಿ: ಆಸ್ತಿ ವಿವಾದ – ಗರ್ಭಿಣಿ ಸೇರಿದಂತೆ ಮೂವರನ್ನು ಬೆಂಕಿಗೆ ಹಾಕಿದ ದುರುಳರು

ಕಾನ್‍ಸ್ಟೆಬಲ್ ರಮೇಶ್ ಸೋಶಿಯಲ್ ಮೀಡಿಯಾದಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಂಚಿಕೊಂಡಿದ್ದಾರೆ. ಅದೇ ಪೋಸ್ಟ್‍ನನ್ನು ಸತ್ವೀರ್ ಸಿಂಗ್ ಇತರ ಶೇರ್ ಮಾಡಿದ್ದಾರೆ. ಈ ಪೋಸ್ಟ್ ಮನಕ್ ಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ ವ್ಯಕ್ತಿಗೂ ಶೇರ್ ಆಗಿದೆ. ಪರಿಣಾಮ ಈ ಅವಹೇಳನಕಾರಿಯಾದ ಪೋಸ್ಟ್ ನೋಡಿದ ವ್ಯಕ್ತಿ ಪೊಲೀಸರಿಗೆ ದೂರು ಕೊಟ್ಟಿದ್ದು, ನಂತರ ಪ್ರಕರಣ ಬೆಳಕಿಗೆ ಬಂದಿದೆ.

ಪೊಲೀಸ್ ಅಧಿಕಾರಿಗಳು ಈ ವಿಷಯವನ್ನು ಗಮನಿಸಿದ್ದು, ಪ್ರಾಥಮಿಕ ತನಿಖೆ ಆರಂಭಿಸಿದ್ದಾರೆ.

Comments

Leave a Reply

Your email address will not be published. Required fields are marked *