ಲಕ್ನೋ: ಆಸ್ತಿ ವಿಚಾರವಾಗಿ ಎರಡು ಕುಟುಂಬಗಳು ನಡು ರಸ್ತೆಯಲ್ಲಿ ಪರಸ್ಪರ ಹಾಕಿ ಸ್ಟಿಕ್‍ನಲ್ಲಿ ಕಾದಾಡಿರುವ ಘಟನೆ ಉತ್ತರ ಪ್ರದೇಶದ ನೋಯ್ಡಾದ ದುಜಾನಾ ಗ್ರಾಮದಲ್ಲಿ ನಡೆದಿದೆ.

ಕೆಲವು ದಿನಗಳ ಹಿಂದೆ ಯುದ್ವೀರ್ ಮತ್ತು ರಾಮ್ಲಖಾನ್ ನಡುವೆ ಆಸ್ತಿ ಹಂಚಿಕೆ ವಿಚಾರ ಇತ್ಯರ್ಥವಾಗಿತ್ತು. ಆದರೆ ಇತ್ಯರ್ಥದ ಬಳಿಕ ರಾಮ್ಲಖಾನ್ ಅವರು ನೀಡಿದ್ದ ಆಸ್ತಿ ಹಂಚಿಕೆಯ ಬಗ್ಗೆ ಅಸಮಾಧಾನಗೊಂಡಿದ್ದರು. ಇದನ್ನೂ ಓದಿ: SSLC ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ – ಮಾ.28 ರಿಂದ ಆರಂಭ
ಗುರುವಾರ ರಾಮ್ಲಖಾನ್, ಅವರ ಪತ್ನಿ ಸುಮನ್ ಮತ್ತು ಮಗ ಅಂಕಿತ್ ಅವರು ಜಮೀನಿಗೆ ಹೋಗುತ್ತಿದ್ದ ವೇಳೆ ಯುದ್ವೀರ್ ಮತ್ತು ಅವರ ಪತ್ನಿ ಹಾಕಿ ಸ್ಟಿಕ್‍ನಿಂದ ಹಲ್ಲೆ ನಡೆಸಿದ್ದಾರೆ. ಇದೀಗ ಘಟನೆಯಲ್ಲಿ ದಂಪತಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಇಬ್ಬರು ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ವೀಡಿಯೋದಲ್ಲಿ ಯುದ್ವೀರ್ ಮತ್ತು ಅವರ ಪತ್ನಿಗೆ ಹಾಕಿಸ್ಟಿಕ್‍ನಿಂದ ಹಲ್ಲೆ ನಡೆಸುತ್ತಿದ್ದಾಗ, ತಮ್ಮನ್ನು ರಕ್ಷಿಸಿಕೊಳ್ಳುವ ಸಲುವಾಗಿ ಹಾಕಿ ಸ್ಟಿಕ್ ಕಿತ್ತುಕೊಂಡು ಯುದ್ವೀರ್ ಅವರು ಅಂಕಿತ್ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಸೋಮವಾರದಿಂದ SSLC ಪರೀಕ್ಷೆ- ಹಿಜಬ್ ನಿಷೇಧ, ಸಮವಸ್ತ್ರ ಕಡ್ಡಾಯ
ಸದ್ಯ ಯುದ್ವೀರ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ರಾಮ್ಲಖಾನ್ ಮತ್ತು ಸುಮನ್ ಅವರನ್ನು ಬಂಧಿಸಿದ್ದಾರೆ. ಜೊತೆಗೆ ಅವರ ಮಗ ಅಂಕಿತ್ ವಿರುದ್ಧ ಐಪಿಸಿ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply