ಹಣಕ್ಕಾಗಿ ಪಾಕ್‍ಗೆ ಸೇನಾ ಮಾಹಿತಿ – ಇಬ್ಬರು ಶಂಕಿತರು ಅರೆಸ್ಟ್

ಲಕ್ನೋ: ಹಣಕ್ಕಾಗಿ ಪಾಕಿಸ್ತಾನಿ (Pakistan) ಗುಪ್ತಚರ ಸಂಸ್ಥೆ (ISI) ಮತ್ತು ಭಯೋತ್ಪಾದಕರಿಗೆ ಗುಪ್ತ ಮಾಹಿತಿ ನೀಡುತ್ತಿದ್ದ ಇಬ್ಬರು ಶಂಕಿತರನ್ನು ಉತ್ತರ ಪ್ರದೇಶದ (Uttar Pradesh) ಭಯೋತ್ಪಾದನಾ ನಿಗ್ರಹ ದಳ (ATS) ಬಂಧಿಸಿದೆ.

ಬಂಧಿತ ಆರೋಪಿಗಳನ್ನು ಪಂಜಾಬ್‍ನ ಭಟಿಂಡಾ ಮೂಲದ ಅಮೃತ್ ಗಿಲ್ ಅಲಿಯಾಸ್ ಅಮೃತ್ ಪಾಲ್ (25) ಮತ್ತು ಗಾಜಿಯಾಬಾದ್‍ನ ರಿಯಾಜುದ್ದೀನ್ (36) ಎಂದು ಗುರುತಿಸಲಾಗಿದೆ. ಬಟಿಂಡಾದಿಂದ ಅಮೃತ್ ಗಿಲ್‍ನನ್ನು ಬಂಧಿಸಲಾಗಿದೆ. ಬಳಿಕ ರಿಯಾಜುದ್ದೀನ್‍ನನ್ನು ವಿಚಾರಣೆಗಾಗಿ ಎಟಿಎಸ್ ಪ್ರಧಾನ ಕಚೇರಿಗೆ ಕರೆಸಲಾಯಿತು. ಅಲ್ಲಿಂದ ಆತನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ವ್ಯಕ್ತಿಯ ಬರ್ಬರ ಹತ್ಯೆ – 2ನೇ ಹೆಂಡತಿಯ ಅಕ್ರಮ ಸಂಬಂಧವೇ ಕಾರಣ ಎಂದ ಮೊದಲ ಪತ್ನಿ

ಕೆಲವರು ಅನುಮಾನಾಸ್ಪದ ಮೂಲಗಳಿಂದ ಹಣವನ್ನು ಪಡೆಯುತ್ತಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಆ ಹಣವನ್ನು ಭಯೋತ್ಪಾದಕ ಚಟುವಟಿಕೆಗಳು ಮತ್ತು ಬೇಹುಗಾರಿಕೆಗೆ ಬಳಸಲಾಗುತ್ತಿದೆ. ಇವರಿಬ್ಬರು ಹಣಕ್ಕಾಗಿ ಐಎಸ್‍ಐಗೆ ಗೌಪ್ಯ ಮಾಹಿತಿಯನ್ನು ಕಳುಹಿಸುತ್ತಿದ್ದಾರೆ ಎಂದು ಎಟಿಎಸ್ ಆರೋಪಿಸಿದೆ.

ರಿಯಾಜುದ್ದೀನ್‍ನ ಬ್ಯಾಂಕ್ ಖಾತೆಯಲ್ಲಿ ಮಾರ್ಚ್ 2022 ಮತ್ತು ಏಪ್ರಿಲ್ 2022ರ ನಡುವೆ 70 ಲಕ್ಷ ರೂ. ಹಣ ವರ್ಗಾವಣೆಯಾಗಿದೆ. ಆ ಹಣವನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಲಾಗಿದೆ. ಅಮೃತ್ ಗಿಲ್‍ಗೆ ಸಹ ಹಣ ವರ್ಗಾವಣೆಯಾಗಿದೆ ಆತ ಸೇನೆಯ ಟ್ಯಾಂಕರ್‍ಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮರಳು ದಂಧೆ ತಡೆಯಲು ಹೋಗಿದ್ದ ಅಧಿಕಾರಿ ಮೇಲೆ ಟ್ರ್ಯಾಕ್ಟರ್ ಹರಿಸಿ ಹತ್ಯೆ