ದಾಖಲೆ ಇಲ್ಲದೇ ಸಾಗಿಸುತ್ತಿದ್ದ 2 ಲಕ್ಷ ರೂ. ಹಣ ವಶ

– ಶಿವಮೊಗ್ಗದಲ್ಲಿ ಮೂವರು ಅಧಿಕಾರಿಗಳ ಅಮಾನತು

ಹಾವೇರಿ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 2 ಲಕ್ಷ ರೂ. ನಗದು ಹಣವನ್ನ ವಶಪಡಿಸಿಕೊಂಡಿರುವ ಘಟನೆ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಹಲಗೇರಿ ಕ್ರಾಸ್ ಬಳಿಯ ಚೆಕ್  ಪೋಸ್ಟ್  ನಲ್ಲಿ ನಡೆದಿದೆ.

ಸುರಪುರ ಮೂಲದ ಗೂಂಡೂಸಾಬ್ ಕರ್ಜಗಿ ಮತ್ತು ಮಾವಲಸಾಬ್ ಒಂಟಿ ಎಂಬುವರು ಕಾರಿನಲ್ಲಿ ಹಣ ಸಾಗಿಸುತ್ತಿದ್ದರು. ರಾಣೇಬೆನ್ನೂರು ನಗರದ ಕಡೆಯಿಂದ ಶಿವಮೊಗ್ಗ ಕಡೆಗೆ ಹೊರಟಿದ್ದ ಕಾರನ್ನು ಚೆಕ್ ಪೋಸ್ಟ್ ಬಳಿ ಪ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ತಪಾಸಣೆ ನಡೆಸಿದಾಗ ಹಣ ಪತ್ತೆಯಾಗಿದೆ. ದಾಖಲೆ ಇಲ್ಲದ ಹಣವನ್ನ ವಶಕ್ಕೆ ಪಡೆದಿರುವ ಅಧಿಕಾರಿಗಳು, ರಾಣೇಬೆನ್ನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕರ್ತವ್ಯ ಲೋಪ: ಶಿವಮೊಗ್ಗದ ಶಿಕಾರಿಪುರ ತಾಲೂಕಿನ ಖವಾಸಪುರ ಚೆಕ್  ಪೋಸ್ಟ್  ನಲ್ಲಿ ರಾತ್ರಿ ವೇಳೆ ವಾಹನಗಳ ತಪಾಸಣೆ ಮಾಡದ ಸಿಬ್ಬಂದಿಯನ್ನು ಕರ್ತವ್ಯ ಲೋಪದ ಆರೋಪದಲ್ಲಿ ಅಮಾನತು ಮಾಡಲಾಗಿದೆ. ರಾತ್ರಿ ವೇಳೆ ವಾಹನ ತಪಾಸಣೆ ಮಾಡದೆ ಚೆಕ್ ಪೋಸ್ಟ್ ಗೆ ಹಾಕಿದ್ದ ಬ್ಯಾರಿಕೇಡ್ ಬದಿಗೆ ಸರಿಸಿ, ನಿದ್ದೆ ಮಾಡುತ್ತಿದ್ದ ಪರಿಣಾಮ ಕ್ರವಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಅವರು ಮೂವರು ಅಧಿಕಾರಿಗಳಾದ ಉಪನ್ಯಾಸಕ ಅಶೋಕ ರಾಜಾ ಬಿ.ವಿ, ಗ್ರಾಪಂ ಕಾರ್ಯದರ್ಶಿ ಮಂಜಪ್ಪ, ಶಿಕ್ಷಣ ಇಲಾಖೆಯ ಚನ್ನೇಶರನ್ನು ಅಮಾನತು ಮಾಡಿ ಆದೇಶ ನೀಡಿದ್ದಾರೆ.

Comments

Leave a Reply

Your email address will not be published. Required fields are marked *