EXCLUSIVE | ಲೋಕಾಯುಕ್ತ ಲಂಚ ಪ್ರಕರಣಕ್ಕೆ ಡೈರಿ ಮಿಸ್ಟರಿ – ನಿಂಗಪ್ಪ ಮನೆಯಲ್ಲಿದ್ದ 2 ಡೈರಿ ರಿಕವರಿ

ಬೆಂಗಳೂರು: ಲೋಕಾಯುಕ್ತ (Lokayukta) ಅಧಿಕಾರಿಗಳ ಜೊತೆ ಸೇರಿ ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿದ್ದ ಪ್ರಕರಣಕ್ಕೆ ಈಗ ದಿನಕ್ಕೊಂದು ಟ್ವಿಸ್ಟ್ ಸಿಗ್ತಾ ಇದೆ.

ಹೌದು, ಐಪಿಎಸ್ ಅಧಿಕಾರಿ ಶ್ರೀನಾಥ್ ಜೋಷಿ (Shrinath Joshi) ಮನೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದರು. ಮನೆಯಲ್ಲಿ ಹುಡುಕಾಟ ನಡೆಸಿ ಬರಿಗೈಯಲ್ಲಿ ಬಂದಿದ್ದ ಲೋಕಾಯುಕ್ತ ಅಧಿಕಾರಿಗಳು, ನಿಂಗಪ್ಪ ಬಳಿ ದಾಖಲೆ ಹುಡುಕಾಟ ನಡೆಸಿದ್ದಾರೆ. ಇದನ್ನೂ ಓದಿ: ಇಷ್ಟ ಇಲ್ಲದಿದ್ರೆ ಸಿನಿಮಾ ನೋಡಬೇಡಿ: ಕರ್ನಾಟಕದಲ್ಲಿ ‘ಥಗ್‌ ಲೈಫ್‌’ ಸಿನಿಮಾ ರಿಲೀಸ್‌ಗೆ ಸುಪ್ರೀಂ ಸೂಚನೆ

ನಿಂಗಪ್ಪ (Ningappa) ಮನೆಯಲ್ಲಿ ಎರಡು ಡೈರಿಗಳು ಪತ್ತೆಯಾಗಿದೆ. ಪೊಲೀಸರು ಎರಡೂ ಡೈರಿಗಳಲ್ಲಿ ಸಿಕ್ಕ ಒಂದಷ್ಟು ನಂಬರ್‌ಗಳನ್ನು ರಿಕವರಿ ಮಾಡಿದ್ದಾರೆ. ರಿಕವರಿ ಮಾಡಿದ ನಂಬರ್‌ಗಳು ಯಾವುವು? ಯಾರಿಗೆ ಸೇರಿದ್ದು? ಯಾರ ಜೊತೆಯಲ್ಲಿ ನಿರಂತರವಾಗಿ ಸಂಪರ್ಕವನ್ನು ಹೊಂದಿದ್ದರು ಎಂಬುದು ತನಿಖೆಯಿಂದ ಹೊರಬೀಳಲಿದೆ. ಇದನ್ನೂ ಓದಿ: ಮಾಡೆಲ್ ಹತ್ಯೆ ಕೇಸ್ – ಗಂಡನ ಬಿಟ್ಟಿದ್ದ ರೂಪದರ್ಶಿಗೆ ನನ್ನ ಮದುವೆಯಾಗು ಅಂತ ಪೀಡಿಸ್ತಿದ್ದ 2 ಮಕ್ಕಳ ತಂದೆ

ನಿಂಗಪ್ಪ, ಅಬಕಾರಿ ಅಧಿಕಾರಿಗಳ ಜೊತೆಯಲ್ಲಿ ಸಂಪರ್ಕ ಹೊಂದಿದ್ದ. ಅವರಿಂದ ಲಂಚ ಪಡೆಯುವ ಪ್ರಯತ್ನಗಳೂ ಆಗಿತ್ತು ಎಂಬ ಆರೋಪವಿದೆ. ಹೀಗಾಗಿ ಪೊಲೀಸರು ತನಿಖೆಗಿಳಿದಿದ್ದಾರೆ.