ಮದುವೆಗೆ ಹೋಗಿ ಬರುತ್ತಿದ್ದವರ ಕಾರು ಅಪಘಾತ – ಇಬ್ಬರು ಸಾವು, ಐವರು ಗಂಭೀರ

ದಾವಣಗೆರೆ: ಸಂಬಂಧಿಕರ ಮದುವೆ (Marriage) ಸಮಾರಂಭಕ್ಕೆ ಕುಟುಂಬ ಸಮೇತರಾಗಿ ಹೋಗಿ ವಾಪಸ್ ತಮ್ಮ ಗ್ರಾಮಕ್ಕೆ ತೆರಳುತ್ತಿದ್ದ ಸಂದರ್ಭ ಭೀಕರ ಕಾರು ಅಪಘಾತವಾದ (Accident) ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಐವರು ಗಂಭೀರ ಗಾಯಗೊಂಡ ಘಟನೆ ದಾವಣಗೆರೆ (Davanagere) ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಹಾವೇರಿ (Haveri) ಜಿಲ್ಲೆಯ ಹೊಸರಿತ್ತಿ ಗ್ರಾಮದ ನಿವಾಸಿಗಳಾದ ಅರುಣ್ ಶೆಟ್ಟರ್ (50) ಹಾಗೂ ತಾಯಿ ವಿಜಯಲಕ್ಷ್ಮಿ ಶೆಟ್ಟರ್ (70) ಘಟನೆಯಲ್ಲಿ ಮೃತಪಟ್ಟಿದ್ದಾರೆ. ಕುಟುಂಬಸ್ಥರೆಲ್ಲಾ ಸೇರಿ ಇಂದು ಮದುವೆಗೆಂದು ತುಮಕೂರಿಗೆ (Tumakuru) ಹೋಗಿ ಕಾರಿನಲ್ಲಿ ವಾಪಸ್ಸಾಗುತ್ತಿದ್ದ ಸಂದರ್ಭ ದಾವಣಗೆರೆ ಬಳಿಯ ಶಿರಮಗೊಂಡನಹಳ್ಳಿ ಸೇತುವೆ ಮೇಲೆ ವೇಗವಾಗಿ ಬಂದ ಕಾರ್ ಟ್ರ‍್ಯಾಕ್ಟರ್‌ಗೆ (Tractor) ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಈ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದು, ಐವರು ಗಂಭೀರ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಮಾಜಿ ಸಚಿವ ಸಿಪಿವೈ ಬಾವ ಮಹದೇವಯ್ಯ ಶವ ಪತ್ತೆ

ಗಾಯಾಳುಗಳನ್ನು ದಾವಣಗೆರೆ ಎಸ್‌ಎಸ್ ಹೈಟೆಕ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸದ್ಯ ಗಾಯಗೊಂಡವರಲ್ಲಿ ಕೆಲವರ ಪರಿಸ್ಥಿತಿ ಗಂಭೀರವಾಗಿದ್ದು, ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕಾಡಾನೆ ದಾಳಿಗೆ 8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ಬಲಿ