ಗದಗ: ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದ ರಾತ್ರಿಯಿಡೀ ರೋಗಿಗಳು ಪರದಾಡಿರುವ ಘಟನೆ ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ನಡೆದಿದೆ.
ಬಾಲಕ ನವೀನ್ ತೀವ್ರ ಜ್ವರದಿಂದ ಬಳಲುತ್ತಿದ್ರೂ ಗಜೇಂದ್ರಗಡ ತಾಲೂಕು ಆಸ್ಪತ್ರೆ ಸಿಬ್ಬಂದಿ ಚಿಕಿತ್ಸೆ ನೀಡಿಲ್ಲ. ಬಾಲಕ ರಾತ್ರಿಯಿಡೀ ಜ್ವರದಿಂದ ಸಾಕಷ್ಟು ಬಳಲಿದ್ದಾನೆ. ಕೇಳಿದ್ರೆ ಎರಡನೆ ಶನಿವಾರ, ರವಿವಾರ ರಜೆ ಇದೆ ಸೋಮವಾರ ಬನ್ನಿ ಎಂದು ನರ್ಸ್ ಗದರಿಸಿ ಕಳುಹಿಸಿದ್ದಾರೆ.

ವೈದ್ಯರಿಗೆ ಫೋನ್ ಮಾಡಿದ್ರೆ ಯಾವುದೇ ಪ್ರತಿಕ್ರಿಯೆ ಇಲ್ಲ ಎಂಬುದು ರೋಗಿಗಳ ಆರೋಪವಾಗಿದೆ. ಗಜೇಂದ್ರಗಡ ಆಸ್ಪತ್ರೆನಲ್ಲಿ ವೈದ್ಯರಾಗಲಿ, ಸಿಬ್ಬಂದಿ ಸರಿಯಾಗಿ ಕರ್ತವ್ಯ ನಿರ್ವಹಿಸದ ಕಾರಣ ಚಿಕಿತ್ಸೆ ನೀಡಲ್ಲ. ಎರಡನೇ ಶನಿವಾರ, ರವಿವಾರ ಅಥವಾ ಇತರೆ ಸರ್ಕಾರಿ ರಜೆ ಬಂದ್ರೆ ಆಸ್ಪತ್ರೆ ಖಾಲಿಖಾಲಿ ಆಗಿರುತ್ತೆ. ಸರ್ಕಾರಿ ರಜೆ ಬಂದ್ರೆ ರೋಗಿಗಳನ್ನ ದಾಖಲು ಸಹ ಮಾಡಿಕೊಳ್ಳುವುದಿಲ್ಲ. ರೋಗಿಗಳಿಗೆ ಹುಷಾರಾಗಲಿ, ಆಗದೇ ಇರಲಿ, ರಜೆಯ ಹಿಂದಿನ ದಿನವೇ ಎಲ್ಲಾ ರೋಗಿಗಳನ್ನ ಡಿಸ್‍ಚಾರ್ಜ್ ಮಾಡಿ ಕಳುಹಿಸುತ್ತಾರೆ. ಇಲ್ಲಿ ಹೆಳೋರು ಕೆಳೋರು ಯಾರೂ ಇಲ್ಲದಂತಾಗಿದೆ ಎಂಬುದು ರೋಗಿಗಳ ಆರೋಪವಾಗಿದೆ.
ಈ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿಗಳು ಆಸ್ಪತ್ರೆ ಸಿಬ್ಬಂದಿ ಮೇಲೆ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ನೊಂದರೋಗಿಗಳು ಪತ್ರ ಬರೆದಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv


Leave a Reply