ಲಕ್ನೋ: ಪ್ರೇಯಸಿ ಮನೆಗೆ ನುಗ್ಗಿ ಆಕೆಯ ಸಹೋದರನನ್ನು ಸಾಯಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಉತ್ತರಪ್ರದೇಶದ ಪಿಲಿಭಿತ್‍ನಲ್ಲಿ ಶನಿವಾರ 19 ವರ್ಷದ ಯುವಕನೊಬ್ಬ ತನ್ನ ಪ್ರೇಯಸಿ ಮನೆಗೆ ನುಗಿದ್ದು, ಆಕೆ ಮತ್ತು ಆಕೆಯ ತಾಯಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಆತನನ್ನು ತಡೆಯಲು ಬಂದ ಪ್ರೇಯಸಿಯ ಸಹೋದರನನ್ನು ಗುಂಡಿಕ್ಕಿ ಕೊಂದಿದ್ದು, ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಸ್ತುತ ಈ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ನಾಯಕತ್ವ ಬದಲಾವಣೆ ಬಗ್ಗೆ ಸಂತೋಷ್ ಯಾಕೆ ಹೇಳಿದ್ದಾರೆ ನನಗೆ ಗೊತ್ತಿಲ್ಲ: ಉಮೇಶ್ ಕತ್ತಿ

ನಡೆದಿದ್ದೇನು?
ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಪ್ರಭು ಈ ಕುರಿತು ಮಾಹಿತಿ ಕೊಟ್ಟಿದ್ದು, ಪ್ರಾಥಮಿಕ ತನಿಖೆಯ ಪ್ರಕಾರ ಇದೊಂದು ಪ್ರೇಮ ಸಂಬಂಧ ವಿಫಲವಾದ ಹಿನ್ನೆಲೆ ಆರೋಪಿ ರಿಂಕು ಗಂಗ್ವಾರ್ ಈ ಕೃತ್ಯ ಮಾಡಿದ್ದಾನೆ ಎಂಬುದು ತಿಳಿದುಬರುತ್ತದೆ. ಆರೋಪಿ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ನಿವಾಸಿಯಾಗಿದ್ದು, ರಚನಾ ಗಂಗ್ವಾರ್ (22)ನನ್ನು ಪ್ರೀತಿಸುತ್ತಿದ್ದ. ಆದರೆ ಆಕೆಯ ಪೋಷಕರು ಬೇರೊಬ್ಬನ ಜೊತೆ ವಿವಾಹವನ್ನು ನಿಶ್ಚಯಿಸಿದ್ದರು.

ಸುದ್ದಿ ಕೇಳಿ ಕೋಪಕೊಂಡ ರಿಂಕು, ಸಿರ್ಸಾ ಗ್ರಾಮದ ರಚನಾ ಅವರ ಮನೆಗೆ ಬೆಳಗ್ಗೆ ನುಗ್ಗಿ ಆಕೆ ಹಾಗೂ ಆಕೆಯ ತಾಯಿ ಮಾಯಾದೇವಿ(50) ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾನೆ. ರಚನಾ ಅವರ ಸಹೋದರ ರವೀಂದ್ರಪಾಲ್(28) ಮಧ್ಯಪ್ರವೇಶಿಸಿದಾಗ, ರಿಂಕು ಅವನನ್ನು ಗುಂಡಿಕ್ಕಿ ಕೊಂದಿದ್ದಾನೆ. ನಂತರ ಅವನು ಅಲ್ಲಿಂದ ಓಡಿಹೋಗಿ ಸುಮಾರು 20 ಮೀಟರ್ ದೂರದಲ್ಲಿ ತನ್ನ ಮೇಲೆ ಗುಂಡು ಹಾರಿಸಿಕೊಂಡಿದ್ದಾನೆ. ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದರು. ಇದನ್ನೂ ಓದಿ: ಪ್ಯಾನ್ ಇಂಡಿಯಾ’ – ಸಿನಿಮಾಗಳಿಗೆ ಅಗೌರವ ತೋರುವ ಪದ, ಇದನ್ನು ತೆಗೆದುಹಾಕಬೇಕು: ಸಿದ್ಧಾರ್ಥ್
ಪ್ರಸ್ತುತ ರಚನಾ ಮತ್ತು ಮಾಯಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದರು.

Leave a Reply