ಕೋಲಾರದಲ್ಲಿ ಉಕ್ಕಿ ಹರಿಯುತ್ತಿದೆ ಪಾಲಾರ್‌ ನದಿ – 19 ಗೇಟ್ ಓಪನ್

ಕೋಲಾರ : ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಬಹುತೇಕ ಕೆರೆಗಳು ತುಂಬಿ ಕೋಡಿ ಹರಿದಿವೆ. ಅದರಲ್ಲೂ ಜಿಲ್ಲೆಯ ದೊಡ್ಡ ಕೆರೆಗಳಲ್ಲಿ ಒಂದಾದ ಪಾಲಾರ್ ನದಿಯಲ್ಲಿ ನೀರಿನ ಒಳ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಜಲಾಶಯದ 19 ಗೇಟ್ ಗಳ ಮೂಲಕ ನೀರನ್ನು ಬಿಡಲಾಗುತ್ತಿದೆ.

ಬೇತಮಂಗಲದ ಪಾಲಾರ್ ಜಲಾಶಯ ಕೆರೆಗೆ ಹೆಚ್ಚಿನ ನೀರು ಬಂದಿದ್ದು 19 ಗೇಟ್ ತೆರೆಯಲಾಗಿದೆ. ನೀರು ಹೆಚ್ಚಾದ ಹಿನ್ನೆಲೆ ಜಲಾಶಯಕ್ಕೆ ಅಡ್ಡಲಾಗಿ ಕಟ್ಟಿರುವ ಸೇತುವೆಯ ಬಾಗಿಲುಗಳು ಹಾಗೂ ಕೆರೆ ಕಟ್ಟೆಯ ಭಾಗ ಬಿರುಕು ಬಿಟ್ಟಿರುವುದು ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ. ಇದನ್ನೂ ಓದಿ: ನಾಯಿ ಮೂತ್ರ ವಿರ್ಸಜನೆ ಮಾಡಿದ್ದಕ್ಕೆ ವೃದ್ಧನಿಗೆ ಕಲ್ಲಿನಿಂದ ಹೊಡ್ದ

ನಾಲ್ಕು ವರ್ಷಗಳ ಹಿಂದೆ 2017 ರಲ್ಲಿ ಕೆರೆ ತುಂಬಿತ್ತು. 1,600 ಎಕರೆ ವಿಸ್ತೀರ್ಣ ಹೊಂದಿರುವ ಪಾಲಾರ್ ಜಲಾಶಯದಲ್ಲಿ 6 ಸಾವಿರ ಕ್ಯೂಸೆಕ್ ನೀರು ಸಂಗ್ರಹವಾಗುತ್ತದೆ. ಒಮ್ಮೆ ತುಂಬಿ ಹರಿದಿದ್ದೆ ಆದಲ್ಲಿ 2-3 ವರ್ಷ ಕೆಜಿಎಫ್ ನಗರ ಸೇರಿದಂತೆ ಬೇತಮಂಗಲದಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಲಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಇಂದು ಮಳೆ ಎಚ್ಚರಿಕೆ – ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆ ಸಾಧ್ಯತೆ

ಕೆರೆ ಕಟ್ಟೆಯಲ್ಲಿ ಬಿರುಕು ಬಿಟ್ಟಿರುವ ಹಿನ್ನೆಲೆ ಮುನ್ನಚ್ವರಿಕಾ ಕ್ರಮವಾಗಿ ನೀರನ್ನು ಹೆಚ್ಚಾಗಿ ಹೊರಕ್ಕೆ ಬಿಡಲಾಗುತ್ತಿದೆ. ಇದರ ಜೊತೆಗೆ ಸರಿಯಾದ ನಿರ್ವಹಣೆ ಇಲ್ಲದೆ ಕ್ರಸ್ಟ್ ಗೇಟ್ ಗಳ ಮೂಲಕವೂ ನೀರು ಸಾಕಷ್ಟು ಸೋರಿಕೆಯಾಗುತ್ತಿರುವುದು ಆತಂಕ ಮೂಡಿಸಿದೆ.

Comments

Leave a Reply

Your email address will not be published. Required fields are marked *