ಬೆಂಗಳೂರು: ರಾಜ್ಯದಲ್ಲಿ ಕೊರೊನಾ(Corona Virus) ಸೋಂಕಿತರ ಸಂಖ್ಯೆ ಮತ್ತು ಸಾವಿನ ಸಂಖ್ಯೆ ಮತ್ತಷ್ಟು ಇಳಿಕೆ ಕಂಡಿದೆ. ಇಂದು ಒಟ್ಟು 181 ಕೇಸ್ ದಾಖಲಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ.

ಕೆಲದಿನಗಳಿಂದ ಪಾಸಿಟಿವ್ ಕೇಸ್‍ಗಳ ಸಂಖ್ಯೆ ಇಳಿಕೆ ಕಂಡರೂ, ಮರಣ ಪ್ರಕರಣ ಕಡಿಮೆಯಾಗಿರಲಿಲ್ಲ. ಇಂದು ಮರಣ ಪ್ರಕರಣ ಕೂಡ ಇಳಿಕೆ ಕಂಡಿದೆ. ಈ ಮೂಲಕ ಕೋವಿಡ್-19(COVID-19) ಮರಣ ಪ್ರಮಾಣ ಶೇ.1.10% ರಷ್ಟಿದೆ. ಬಾಗಲಕೋಟೆ, ಬೀದರ್, ಚಿಕ್ಕಬಳ್ಳಾಪುರ, ಗದಗ, ಕೊಪ್ಪಳ, ಉಡುಪಿ ಹಾಗೂ ವಿಜಯಪುರದಲ್ಲಿ ಶೂನ್ಯ ಪ್ರಕರಣ ದಾಖಲಾಗಿದೆ. ಪಾಸಿಟಿವಿಟಿ ರೇಟ್ (Positive Rate) 0.32%ಕ್ಕೆ ಇಳಿಕೆ ಕಂಡಿದೆ. ಜೊತೆಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 2,937ಕ್ಕೆ ಇಳಿಮುಖಗೊಂಡಿದೆ. ಬೆಂಗಳೂರಿನಲ್ಲಿ ಪಾಸಿಟಿವ್ ಕೇಸ್‍ಗಳ ಸಂಖ್ಯೆ ಮತ್ತಷ್ಟು ಇಳಿಕೆ ಕಂಡಿದ್ದು, ಇಂದು ಒಟ್ಟು 122 ಹೊಸ ಕೇಸ್ ಪತ್ತೆಯಾಗಿದೆ. ಇದನ್ನೂ ಓದಿ: ಗೆಳತಿಗೆ ಪ್ರಪೋಸ್ ಮಾಡಿದ ಉಕ್ರೇನ್ ಯೋಧನ ಮನಕರಗುವ ವೀಡಿಯೋ

ಒಟ್ಟು 222 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ ರಾಜ್ಯದಲ್ಲಿ ಒಟ್ಟು 39,43,108 ಮಂದಿಗೆ ಕೊರೊನಾ ಬಂದಿದೆ. ಒಟ್ಟು 39,00,127 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಒಟ್ಟು 1,06,988 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 55829 ಸ್ಯಾಂಪಲ್ (ಆರ್‍ಟಿ ಪಿಸಿಆರ್ 44,932 + 10897 ರ್ಯಾಪಿಡ್ ಆಂಟಿಜನ್)ಗಳನ್ನು ಇಮದು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ರಷ್ಯಾ ತೈಲ ನಿಷೇಧ- ಅಮೆರಿಕ ಅಧ್ಯಕ್ಷರ ಫೋನ್ ಕರೆಗೂ ಕ್ಯಾರೆ ಎನ್ನದ ಸೌದಿ ಅರೇಬಿಯಾ, ಯುಎಇ
ಇಂದಿನ 09/03/2022 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/JqSW9NrbNh @CMofKarnataka @BSBommai @mla_sudhakar @Comm_dhfwka @BBMPCOMM @mysurucitycorp @mangalurucorp @DDChandanaNews @PIBBengaluru @KarnatakaVarthe pic.twitter.com/NrRNOuhPFs
— Karnataka Health Department (@DHFWKA) March 9, 2022
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ಬಾಗಲಕೋಟೆ 0, ಬಳ್ಳಾರಿ 2, ಬೆಳಗಾವಿ 5, ಬೆಂಗಳೂರು ಗ್ರಾಮಾಂತರ 1, ಬೆಂಗಳೂರು ನಗರ 122, ಬೀದರ್ 0, ಚಾಮರಾಜನಗರ 4, ಚಿಕ್ಕಬಳ್ಳಾಪುರ 0, ಚಿಕ್ಕಮಗಳೂರು 5, ಚಿತ್ರದುರ್ಗ 5, ದಕ್ಷಿಣ ಕನ್ನಡ 3, ದಾವಣಗೆರೆ 1, ಧಾರವಾಡ 2, ಗದಗ 0, ಹಾಸನ 2, ಹಾವೇರಿ 1, ಕಲಬುರಗಿ 3, ಕೊಡಗು 2, ಕೋಲಾರ 1, ಕೊಪ್ಪಳ 0, ಮಂಡ್ಯ 1, ಮೈಸೂರು 6, ರಾಯಚೂರು 2, ರಾಮನಗರ 4, ಶಿವಮೊಗ್ಗ 1, ತುಮಕೂರು 4, ಉಡುಪಿ 0, ಉತ್ತರ ಕನ್ನಡ 1, ವಿಜಯಪುರ 0 ಮತ್ತು ಯಾದಗಿರಿಯಲ್ಲಿ 3 ಪಾಸಿಟಿವ್ ಪ್ರಕರಣ ದಾಖಲಾಗಿದೆ.

Leave a Reply