ವಿಜಯಪುರ: ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ ಹಿನ್ನಲೆಯಲ್ಲಿ ಮನನೊಂದು ಯುವತಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ವಿಜಯಪುರದಲ್ಲಿ ನಡೆದಿದೆ.
ಲತಾ ಚಂದು ಚವ್ಹಾನ್(18) ಆತ್ಮಹತ್ಯೆಗೆ ಯತ್ನಿಸಿದ ಯುವತಿ. ವಿಜಯಪುರ ತಾಲೂಕಿನ ಹಂಚಿನಾಳ ತಾಂಡಾ ನಿವಾಸಿಯಾಗಿರುವ ಲತಾ, ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಸಾಮಾಜಿಕ ಜಾಲಾತಾಣ ಫೇಸ್ ಬುಕ್ ಲೈವ್ ನಲ್ಲಿ ತನ್ನ ಸಾವಿಗೆ ಕಾರಣರಾಗಿರುವವರ ಹೆಸರು ಮತ್ತು ಬಹಿಷ್ಕಾರದಿಂದ ತನ್ನ ವಿದ್ಯಾಭ್ಯಾಸ ಸ್ಥಗಿತವಾದ ಬಗ್ಗೆ ನೊಂದು ಅಳಲು ತೋಡಿಕೊಂಡು ನಿದ್ರೆ ಮಾತ್ರೆ ಹಾಗೂ ವಿಷಯುಕ್ತ ಪುಡಿ ಸೇವಿಸಿ ಲತಾ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಸದ್ಯ ಲತಾ ಪ್ರಾಣಾಪಾಯದಿಂದ ಪಾರಾಗಿದ್ದು, ವಿಜಯಪುರ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಜಮೀನು ವ್ಯಾಜ್ಯದ ಕಾರಣ ಸ್ವಧರ್ಮೀಯರೇ ಲತಾ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ ಅಂತ ಆರೋಪಿಸಿದ್ದಾಳೆ. ಈ ಸಂಬಂಧ ಸದ್ಯ ಯಾವುದೇ ದೂರು ದಾಖಲಾಗಿಲ್ಲ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply