ಫೇಸ್‍ಬುಕ್‍ನಲ್ಲಿ ಪರಿಚಯ- ಸ್ನೇಹಿತನಿಂದ ಅಪ್ರಾಪ್ತೆಯ ಅಪಹರಿಸಿ ಗ್ಯಾಂಗ್ ರೇಪ್

ಭೋಪಾಲ್: ಅಪ್ರಾಪ್ತೆಯೊಬ್ಬಳನ್ನು ಆಕೆಯ ಫೇಸ್‍ಬುಕ್ (Facebook) ಸ್ನೇಹಿತನೊಬ್ಬ ಕಾರಿನಲ್ಲಿ ಅಪಹರಿಸಿ ಬಳಿಕ ಇಬ್ಬರು ಸ್ನೇಹಿರೊಂದಿಗೆ ಸೇರಿ ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ಮಧ್ಯಪ್ರದೇಶದ (Madhya Pradesh) ಗ್ವಾಲಿಯರ್‌ನಲ್ಲಿ ನಡೆದಿದೆ. ಈ ಸಂಬಂಧ ಸ್ಥಳೀಯ ಮಾಜಿ ಶಾಸಕರ ಸಂಬಂಧಿ ಸೇರಿದಂತೆ ಇಬ್ಬರು ಶಂಕಿತರನ್ನು ಬಂಧಿಸಲಾಗಿದೆ.

ಬಂಧಿತ ಆರೋಪಿಗಳನ್ನು ರಾಮು ಮತ್ತು ಸರವಿಂದ್ ಎಂದು ಗುರುತಿಸಲಾಗಿದೆ. ಅಪ್ರಾಪ್ತ ಬಾಲಕಿ ಪ್ರಕರಣದ ಪ್ರಮುಖ ಆರೋಪಿ ರಾಮು ಕುಶ್ವಾಹ ಎಂಬವನ ಜೊತೆ ಫೇಸ್‍ಬುಕ್‍ನಲ್ಲಿ ಪರಿಚಯವಾಗಿದ್ದಳು. ನ.21 ರಂದು ಆಕೆ ಕೆಲಸಕ್ಕೆ ತೆರಳಿ ವಾಪಸ್ ಆಗುವಾಗ ಆರೋಪಿ ಜೊತೆ ಮಾತಾಡಿದ್ದಳು. ಈ ವೇಳೆ ಆಕೆ ಇರುವ ಸ್ಥಳ ತಿಳಿಸಿದಾಗ ಆತ ತನಗಾಗಿ ಕಾಯುವಂತೆ ತಿಳಿಸಿದ್ದ. ಬಳಿಕ ಪ್ರಮುಖ ಆರೋಪಿ ರಾಮು ಜೊತೆ ಇನ್ನಿಬ್ಬರು ಕಾರಿನಲ್ಲಿ ಬಂದು ಆಕೆಯನ್ನು ಅಪಹರಿಸಿದ್ದರು. ನಂತರ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾಳೆ. ಇದನ್ನೂ ಓದಿ: ನಕಲಿ ಟಿಕೆಟ್ ತೋರಿಸಿ ಏರ್‌ಪೋರ್ಟ್ ಒಳಗೆ ನುಗ್ಗಿದ ಮಹಿಳೆ- ಎಫ್‍ಐಆರ್ ದಾಖಲು

ಅಲ್ಲದೇ ಬಾಲಕಿ ದೌರ್ಜನ್ಯದ ವೇಳೆ ಪ್ರಜ್ಞೆ ತಪ್ಪಿದ್ದು, ಆಕೆಗೆ ಪ್ರಜ್ಞೆ ಬಂದಾಗ ಪೊದೆ ಒಂದರ ಬಳಿ ಎಸೆದು ಹೋಗಿದ್ದರು. ಪ್ರಜ್ಞೆ ಬಂದ ಬಳಿಕ ಆಕೆ ಪೊಲೀಸ್ (Police) ಠಾಣೆಗೆ ತೆರಳಿ ಮಾಹಿತಿ ನೀಡಿದ್ದಾಳೆ. ಕೂಡಲೇ ಪೊಲೀಸರು ರಾಮು ಮತ್ತು ಸರವಿಂದ್‍ನನ್ನು ಬಂಧಿಸಿದ್ದಾರೆ.

ಪ್ರಕರಣದ ಮತ್ತೋರ್ವ ಆರೋಪಿ ಛೋಟೆ ಖಾನ್ ತಲೆಮರೆಸಿಕೊಂಡಿದ್ದು ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಸೋಶಿಯಲ್‌ ಮೀಡಿಯಾದಲ್ಲಿ ಯುವತಿಯರ ಫೋಟೋ ಬಳಸಿಕೊಂಡು ಲಕ್ಷ ಲಕ್ಷ ದೋಚಿದ ಖದೀಮ