ಮಾಜಿ ಪ್ರಿಯಕರನಿಗೆ ಗುಂಡು ಹಾರಿಸಿ ಕೊಂದ ಅಪ್ರಾಪ್ತೆ

ಚಂಡೀಘಢ: 17 ವರ್ಷದ ಅಪ್ರಾಪ್ತೆ ತನ್ನ ಮಾಜಿ ಪ್ರಿಯಕರನ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಹರಿಯಾಣದ ಸೋನಿಪತ್ ನ ಮಾತಿಂಧು ಗ್ರಾಮದಲ್ಲಿ ನಡೆದಿದೆ.

ದೀಪಕ್ ಕುಮಾರ್(19) ಕೊಲೆಯಾದ ದುರ್ದೈವಿ. ಆರೋಪಿ ಬಾಲಕಿ 12 ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಫೆಬ್ರವರಿ 21 ರಂದು ದೀಪಕ್ ನನ್ನು ಸಿನಿಮಾ ಶೈಲಿಯಲ್ಲಿ ಗುಂಡು ಹಾರಿಸಿ ಕೊಲೆ ಮಾಡಿದ್ದಾಳೆ. ಸದ್ಯ ಆಕೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದೀಪಕ್‍ನ ಮೃತದೇಹ ಕುಟುಂಬದ ತೋಟದಲ್ಲಿ ಪತ್ತೆಯಾಗಿದೆ. ನನ್ನ ಮಗ ಶಾಲೆ ಮುಗಿಸಿ ಬಂದ ನಂತರ ಕೃಷಿ ಚಟುವಟಿಕೆಗಳಲ್ಲಿ ಸಹಾಯ ಮಾಡುತ್ತಿದ್ದ. ಪ್ರತಿ ರಾತ್ರಿ ಪ್ರಾಣಿಗಳ ಆರೈಕೆ ಮಾಡಿಕೊಂಡು ಅಲ್ಲೇ ಒಬ್ಬನೇ ಮಗಲುತ್ತಿದ್ದ. ನಾನು ಫೆಬ್ರವರಿ 21 ಬೆಳಿಗ್ಗೆ ನನ್ನ ಮಗನನ್ನು ನೋಡಲು ಹೋದಾಗ ಗುಂಡೇಟಿನಿಂದ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಎಂದು ದೀಪಕ್ ತಂದೆ ಸಾಮುಂದರ್ ಸಿಂಗ್ ಹೇಳಿದ್ದಾರೆ.

ಆರೋಪಿಯ ಜೊತೆ ತನ್ನ ಮಗನಿಗೆ ಪ್ರೇಮ ಇದ್ದುದ್ದರಿಂದ ಇದೊಂದು ಮರ್ಯಾದಾ ಹತ್ಯೆ ಎಂದು ಸಮಂದಾರ್ ಮೊದಲಿಗೆ ಸಂಶಯಿಸಿದ್ದರು. ಹುಡುಗಿಗೆ ಈಗಾಗಲೇ ಕುಟುಂಬದವರು ಬೇರೆ ಹುಡುಗನ ಜೊತೆ ಮದುವೆ ನಿಶ್ಚಯ ಮಾಡಿದ್ದರು. ಮೃತನ ತಂದೆ ನೀಡಿದ್ದ ದೂರಿನನ್ವಯ ಆರೋಪಿ ಬಾಲಕಿಯ ತಂದೆ ಮತ್ತು ಸಹೋದರನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಆದ್ರೆ ಒಂದು ವಾರದ ನಂತರ, ದೀಪಕ್ ನನ್ನು ಕೊಲೆ ಮಾಡಿದ್ದು ಕುಟುಂಬದ ಸದಸ್ಯರಲ್ಲ ಅಪ್ರಾಪ್ತ ಬಾಲಕಿ ಎಂಬುದನ್ನ ಪೊಲೀಸರು ಪತ್ತೆಹಚ್ಚಿದ್ದಾರೆ. ಕೊಲೆ ಮಾಡಿದ ಸ್ಥಳದಲ್ಲಿ ಆರೋಪಿಯ ಬಳೆಗಳ ಚೂರುಗಳು ಪತ್ತೆಯಾಗಿತ್ತು. ನಂತರ ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ.

ದೀಪಕ್ ಅನೇಕ ವರ್ಷಗಳಿಂದ ಅಪ್ರಾಪ್ತೆಯನ್ನು ಪ್ರೀತಿಸುತ್ತಿದ್ದನು. ಆಕೆಯನ್ನೇ ಮದುವೆಯಾಗಲು ನಿರ್ಧರಿಸಿದ್ದ. ಆದ್ರೆ ಹುಡುಗಿ ಮನೆಯವರು ಹುಡುಗಿಗೆ ಬೆದರಿಕೆ ಹಾಕಿ ಬೇರೆ ವರನನ್ನು ನೋಡಿದ್ದರು. ಇದಕ್ಕೆ ದೀಪಕ್ ವಿರೋಧ ವ್ಯಕ್ತಪಡಿಸಿದ್ದನು. ಇದರಿಂದ ಮದುವೆಯ ಹಿಂದಿನ ರಾತ್ರಿ ಇಬ್ಬರಿಗೂ ಜಗಳ ನಡೆದಿದ್ದು, ಕೊನೆಗೆ ದೀಪಕ್ ವರ್ತನೆಯಿಂದ ಕೋಪಗೊಂಡ ಅಪ್ರಾಪ್ತೆ ಸಹೋದರನ ಪಿಸ್ತೂಲ್ ಹಿಡಿದು ಮಧ್ಯರಾತ್ರಿ ದೀಪಕ್ ಮನೆಗೆ ಬಂದಿದ್ದಳು. ನಂತ್ರ ದೀಪಕ್ ಮೇಲೆ ಗುಂಡು ಹಾರಿಸಿದ್ದಳು ಎಂದು ಖರ್ಖೋಡಾ ಪೊಲೀಸ್ ಠಾಣೆಯ ಉಸ್ತುವಾರಿ ವೀರೇಂದ್ರ ಸಿಂಗ್ ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತೆಯನ್ನು ಬಾಲಾಪರಾಧಿಗಳ ಜೈಲಿಗೆ ಕಳಿಸಲಾಗಿದೆ.

Comments

Leave a Reply

Your email address will not be published. Required fields are marked *