16ರ ಹುಡುಗಿ ಮೇಲೆ ತಂದೆ, ಸಹೋದರನಿಂದಲೇ 2ವರ್ಷ ನಿರಂತರ ಅತ್ಯಾಚಾರ

RAPE

ಮುಂಬೈ: 16 ವರ್ಷದ ಹುಡುಗಿಯೊಬ್ಬಳು ತನ್ನ ತಂದೆ ಹಾಗೂ ಸಹೋದರ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ತನ್ನ ಮೇಲೆ ಅತ್ಯಾಚಾರ ವೆಸಗಿರುವುದಾಗಿ ಆರೋಪಿಸಿದ್ದಾಳೆ. ಸದ್ಯ ಪೊಲೀಸರು ತಂದೆ ಹಾಗೂ ಮಗ ಇಬ್ಬರನ್ನು ಬಂಧಿಸಿದ್ದಾರೆ.

10ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ತನ್ನ ಶಿಕ್ಷಕಿ ಮತ್ತು ಪ್ರಾಂಶುಪಾಲರ ಬಳಿ ಈ ವಿಚಾರವನ್ನು ಹೇಳಿಕೊಂಡಾಗ ಸತ್ಯ ಬಹಿರಂಗಗೊಂಡಿದೆ. ನಂತರ ಶಾಲಾ ಅಧಿಕಾರಿಗಳು ಎನ್‍ಜಿಒ ಸಂಪರ್ಕಿಸಿದ್ದು, ಪೊಲೀಸರಿಗೆ ಘಟನೆ ಕುರಿತಂತೆ ದೂರು ದಾಖಲಿಸುವಂತೆ ಹುಡುಗಿಗೆ ಸಲಹೆ ನೀಡಿದ್ದಾರೆ. ಇದನ್ನೂ ಓದಿ: ರಾಷ್ಟ್ರಪಿತನ ಬಗ್ಗೆ ಅವಹೇಳನಕಾರಿ ಹೇಳಿಕೆ – ಕಾಳಿಚರಣ್ ಮಹಾರಾಜ್ ಬಂಧನ

2019ರ ಜನವರಿಯಲ್ಲಿ ತನ್ನ 43 ವರ್ಷದ ತಂದೆ ಮೊದಲ ಬಾರಿಗೆ ಆಕೆ ಒಂಟಿಯಾಗಿ ಮಲಗಿದ್ದನ್ನು ಕಂಡು ಲೈಂಗಿಕ ಕಿರುಕುಳ ನೀಡಿರುವುದಾಗಿ ತಿಳಿಸಿದ್ದಾಳೆ. ಬಳಿಕ ಆಕೆಯ 20 ವರ್ಷದ ಸಹೋದರ ಕೂಡ ಕಿರುಕುಳ ನೀಡಿರುದಾಗಿ ತಿಳಿಸಿದ್ದಾಳೆ. ತನ್ನ ತಂದೆ ಹಾಗೂ ಸಹೋದರ ಇದೇ ರೀತಿ ತನ್ನ ತಂಗಿಗೂ ಸಹ ಲೈಂಗಿಕವಾಗಿ ಕಿರುಕುಳ ನೀಡುತ್ತಾರೆ ಎಂಬ ಭಯದಿಂದ ಇದೀಗ ತನ್ನ ಕಷ್ಟವನ್ನು ಶಿಕ್ಷಕಿಯರ ಬಳಿ ಹೇಳಿಕೊಂಡಿರುವುದಾಗಿ ತಿಳಿಸಿದ್ದಾಳೆ.

ಬಾಲಕಿ ದೂರಿನ ಆಧಾರದ ಮೇಲೆ ಭಾರತೀಯ ದಂಡ ಸಂಹಿತೆ ಮತ್ತು ಪೋಕ್ಸೋ ಕಾಯ್ದೆ ಸಂಬಂಧಿಸಿದ ಸೆಕ್ಷನ್‍ಗಳ ಅಡಿ ಪೊಲೀಸತು ಪ್ರಕರಣ ದಾಖಲಿಸಿಕೊಂಡಿದ್ದು, ಹುಡುಗಿಯ ತಂದೆ ಹಾಗೂ ಸಹೋದರನನ್ನು ಪೊಲೀಸರು ಬಂಧಿಸಿದ್ದಾರೆ ಮತ್ತು ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಲತಾ ಮಂಗೇಶ್ಕರ್‌ಗೆ ಐಸಿಯುನಲ್ಲೇ ಚಿಕಿತ್ಸೆ ಮುಂದುವರಿಕೆ

Comments

Leave a Reply

Your email address will not be published. Required fields are marked *