16ನೇ ವಯಸ್ಸಿಗೆ ಸಾವಿನ ಮನೆಯ ಕದ ತಟ್ಟಿದ್ಯಾಕೆ ಸಿಯಾ?

ನವದೆಹಲಿ: ಟಿಕ್‍ಟಾಕ್ ಸ್ಟಾರ್ ಸಿಯಾ ಕಕ್ಕರ್ ಆತ್ಮಹತ್ಯೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಟಿಕ್‍ಟಾಕ್ ಮೂಲಕ ಚಿರಪರಿಚತಳಾಗಿದ್ದ ಸಿಯಾ ಚಿಕ್ಕ ವಯಸ್ಸಿನಲ್ಲಿಯೇ ಅತ್ಮಹತ್ಯೆ ಮಾಡಿಕೊಂಡು ಕುಟುಂಬಸ್ಥರಿಗೂ ಹಾಗೂ ಅಭಿಮಾನಿಗಳು ದೊಡ್ಡ ಶಾಕ್ ನೀಡಿದ್ದಳು. ಜೂನ್ 25 ಸಿಯಾ ನೇಣಿಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ನಿರ್ಧಾರಕ್ಕೆ ಇದುವರೆಗೂ ನಿಖರ ಕಾರಣ ತಿಳಿದು ಬಂದಿಲ್ಲ.

ದೆಹಲಿಯ ನಿವಾಸಿಯಾಗಿದ್ದ ಸಿಯಾ ತಮ್ಮ ಟಿಕ್‍ಟಾಕ್, ಡ್ಯಾನ್ಸ್, ಫೋಟೋ ಶೂಟ್, ಡಬ್ಬಿಂಗ್ ಮೂಲಕ ಅಪಾರ ಫಾಲೋವರ್ಸ್ ಗಳನ್ನು ಹೊಂದಿದ್ದಳು. ಗುರುವಾರ ಬೆಳಗ್ಗೆ ಸಿಯಾ ಮೃತದೇಹ ಆಕೆಯ ಕೋಣೆಯಲ್ಲಿ ಸಿಕ್ಕಿತ್ತು. ಇನ್ನು ಬುಧವಾರ ಇನ್‍ಸ್ಟಾಗ್ರಾಂನಲ್ಲಿ ವಿಡಿಯೋ ಅಪ್ಲೋಡ್ ಮಾಡಿಕೊಂಡಿದ್ದ ಸಿಯಾಳ ಈ ನಿರ್ಧಾರಕ್ಕೆ ಕಾರಣ ಏನು ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಸಂಬಂಧ ಸಿಯಾ ಮ್ಯಾನೇಜರ್ ಅರ್ಜುನ್ ಸಿರಿನ್ ಹಾಗೂ ಕುಟುಂಬಸ್ಥರ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

https://www.instagram.com/p/B-UGR3ypxnE/

ಬೆದರಿಕೆ ಕರೆ: ಸಿಯಾಳಿಗೆ ಕೆಲ ಬೆದರಿಕೆ ಕರೆಗಳು ಬರ್ತಾ ಇದ್ದವು ಎನ್ನಲಾಗಿದೆ. ಈ ಕುರಿತು ಸ್ಥಳೀಯ ಪತ್ರಿಕೆಗಳಲ್ಲಿಯೂ ಸುದ್ದಿ ಪ್ರಕಟವಾಗಿದೆ. ಅಪರಿಚಿತರ ಫೋನ್ ಕಾಲ್ ಗಳಿಂದ ಬೇಸತ್ತು ಸಿಯಾ ನೇಣಿಗೆ ಶರಣಾಗಿರಬಹುದೆಂದು ಎಂಬ ಅನುಮಾನಗಳು ದಟ್ಟವಾಗಿವೆ. ಈ ಅನುಮಾನಗಳ ಕುರಿತು ಪೊಲೀಸರು ಇದುವರೆಗೂ ಯಾವುದೇ ಸ್ಪಷ್ಟನೆಯನ್ನ ಸಹ ನೀಡಿಲ್ಲ.

https://www.instagram.com/p/B9d67kbpUg9/

ಮಗಳ ಸಾವಿನ ಬಗ್ಗ ಪ್ರತಿಕ್ರಿಯಿಸಿರುವ ಪೋಷಕರು, ಅವಳ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿ ಎಂದು ಹೇಳಿದ್ದಾರೆ. ಇನ್ನು ಸಿಯಾಳ ಸಾವಿಗೆ ಸಂತಾಪ ಸೂಚಿಸಿರೋ ಖ್ಯಾತ ಫೋಟೋಗ್ರಾಫರ್ ವಿರಲ್ ಬಯಾನಿ, ಬುಧವಾರ ಸಂಜೆಯವರೆಗೂ ಆಕೆ ಚೆನ್ನಾಗಿದ್ದಳು. ಸಿಯಾ ಮ್ಯಾನೇಜರ್ ಅರ್ಜುನ್ ಸರಿನ್ ಜೊತೆ ಹಾಡಿನ ಬಗ್ಗೆ ಮಾತುಕತೆ ಆಗಿತ್ತು. ಆದ್ರೆ ಸಿಯಾ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಜೊತೆಯಲ್ಲಿಯೇ ಇರುತ್ತಿದ್ದ ಮ್ಯಾನೇಜರ್ ಅರ್ಜುನ್‍ಗೂ ಈ ಬಗ್ಗೆ ಸುಳಿವು ಸಿಕ್ಕಿರಲಿಲ್ಲ ಎಂದು ಇನ್‍ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *