15 ವರ್ಷದ ಬಾಲಕಿಯನ್ನು ಅಪಹರಿಸಿ 6 ತಿಂಗಳವರೆಗೆ ಅತ್ಯಾಚಾರ – ಆರೋಪಿ ಅರೆಸ್ಟ್

ಲಕ್ನೋ: 15 ವರ್ಷದ ಬಾಲಕಿಯನ್ನು ಅಪಹರಿಸಿ ಆರು ತಿಂಗಳ ಕಾಲ ಅತ್ಯಾಚಾರ (Rape) ಎಸಗಿದ ಘಟನೆ ಉತ್ತರಪ್ರದೇಶದ (Uttar Pradesh) ಬಲ್ಲಿಯಾದಲ್ಲಿ (Ballia) ನಡೆದಿದೆ.

ಶನಿವಾರ ಬಾಲಕಿಯನ್ನು ರಕ್ಷಿಸಿದ್ದು, ಆರೋಪಿ ಆಶಿಶ್ ಕುಮಾರ್‌ನನ್ನು (24) ಬಂಧಿಸಲಾಗಿದೆ (Arrest) ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಇದನ್ನೂ ಓದಿ: ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಬಸ್‌ಗೆ ಟ್ರಕ್ ಡಿಕ್ಕಿ; ನಾಲ್ವರು ಸಾವು, 22 ಜನರಿಗೆ ಗಾಯ 

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಬಾಲಕಿ ಕಾಣೆಯಾಗಿದ್ದಾಳೆ ಎಂಬ ದೂರನ್ನು ಬಾಲಕಿ ಪೋಷಕರು ನೀಡಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್‌ಐಆರ್ (FIR) ದಾಖಲಿಸಲಾಗಿತ್ತು ಎಂದು ತಖಾ ಪೊಲೀಸ್ ಹೊರಠಾಣೆ ಪ್ರಭಾರಿ ಫೂಲ್‌ಚಂದ್ರ ಯಾದವ್ ಹೇಳಿದ್ದಾರೆ. ಸುಳಿವಿನ ಮೇರೆಗೆ ಶನಿವಾರ ಬಾಲಕಿಯನ್ನು ಗದ್ವಾರ್ ಪ್ರದೇಶದಿಂದ ರಕ್ಷಿಸಲಾಗಿದ್ದು, ಆಶಿಶ್ ಕುಮಾರ್‌ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಸೈನಿಕರ ವಾಹನದ ಮೇಲೆ ದಾಳಿ ಪ್ರಕರಣ – 12 ಶಂಕಿತರು ವಶಕ್ಕೆ 

ಬಾಲಕಿ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಕಳೆದ ಆರು ತಿಂಗಳಿನಿಂದ ಆರೋಪಿಯು ತನ್ನ ಮೇಲೆ ಪದೇ ಪದೇ ಅತ್ಯಾಚಾರವೆಸಗಿರುವುದಾಗಿ ತಿಳಿಸಿದ್ದಾಳೆ. ಇದನ್ನೂ ಓದಿ: ವಕೀಲನಂತೆ ವೇಷ ಧರಿಸಿದ್ದ ವ್ಯಕ್ತಿಯಿಂದ ದೆಹಲಿ ನ್ಯಾಯಾಲಯದಲ್ಲಿ ಗುಂಡಿನ ದಾಳಿ – ಮಹಿಳೆಯ ಸ್ಥಿತಿ ಗಂಭೀರ 

ಈ ಕುರಿತು ಆರೋಪಿಯ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಅತೀಕ್ ಅಹ್ಮದ್ 1,169 ಕೋಟಿ ರೂ. ಒಡೆಯ- ಹುಡುಕಿದಷ್ಟು ಸಿಗುತ್ತಿದೆ ಗ್ಯಾಂಗಸ್ಟರ್‌ನ ಆಸ್ತಿ