15 ಕೋಟಿ ವ್ಯವಹಾರವೇ ಖ್ಯಾತ ನಟ ಸತೀಶ್ ಕೌಶಿಕ್ ಸಾವಿಗೆ ಕಾರಣ

ಬಾಲಿವುಡ್ (Bollywood) ಖ್ಯಾತ ನಟ ಹಾಗೂ ನಿರ್ದೇಶಕ ಸತೀಶ್ ಕೌಶಿಕ್ (Satish Kaushik) ಸಾವು ಹೃದಯಾಘಾತದಿಂದ ಆಗಿದ್ದು ಎಂದು ಹೇಳಲಾಗಿತ್ತು, ಆದರೆ  ಈ ಸಾವಿಗೆ (Death) ಬೇರೆ ತಿರುವು ನೀಡಲಾಗುತ್ತಿದೆ. ಈ ಸಾವಿನ ಹಿಂದೆ 15 ಕೋಟಿ ರೂಪಾಯಿಗಳಿಗಾಗಿ ನಡೆದ ಕೊಲೆ ಎಂದು ದೂರು ದಾಖಲಾಗಿದೆ. ದೆಹಲಿ ಮೂಲದ ಉದ್ಯಮಿಯೊಬ್ಬರ ಪತ್ನಿಯು, ತನ್ನ ಪತಿ ಮೇಲೆಯೇ ಈ ಕೊಲೆಯ ಆರೋಪವನ್ನೂ ಮಾಡಿದ್ದಾರೆ. ಕಲೆ ಮಾತ್ರೆಗಳು ನೀಡಿ ಸತೀಶ್ ಅವರನ್ನು ಕೊಲ್ಲಲಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ದೆಹಲಿ ಪೊಲೀಸ್ ಕಮಿಷನರ್ ಗೆ ದೂರು ನೀಡಿರುವ ಆ ಮಹಿಳೆ, ಎರಡು ದಿನಗಳ ಹಿಂದೆ ನಡೆದ ಹೋಳಿ ಆಚರಣೆಗಾಗಿ ಸತೀಶ್ ಫಾರ್ಮ್ ಹೌಸ್ ಗೆ ಬಂದಿದ್ದರು. ಅಲ್ಲಿ ಔಷಧಿ ನೀಡಿ ಕೊಲೆ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಹಣದ ವ್ಯವಹಾರಕ್ಕಾಗಿ ಸತೀಶ್ ಮತ್ತು ತಮ್ಮ ಪತಿ ದೆಹಲಿ ಮತ್ತು ದುಬೈನಲ್ಲಿ ಭೇಟಿ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ. ಸತೀಶ್ ಸಾವಿನ ಹಿಂದಿನ ದಿನ ಹೋಳಿ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಆ ಸ್ಥಳದಲ್ಲಿ ಔಷಧಿ ಸಿಕ್ಕಿದೆ ಎಂದು ಗೊತ್ತಾಗಿದೆ. ಇದನ್ನೂ ಓದಿ: ರಿಷಬ್ ಶೆಟ್ಟಿ ಮಗಳ ಬರ್ತ್‌ಡೇ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್ ತಾರೆಯರು

ಸತೀಶ್ ಸಾವಿನ ಅನುಮಾನದ ಹಿನ್ನೆಲೆಯಲ್ಲಿ ಪೊಲೀಸರು ಹೋಳಿ ಪಾರ್ಟಿಯಲ್ಲಿ ಭಾಗಿಯಾಗಿದ್ದ ಫಾರ್ಮ್ ಹೌಸ್ ಗೆ ಭೇಟಿ ನೀಡಿದ್ದರು. ಪಾರ್ಟಿ ನಡೆದ ಸ್ಥಳದಲ್ಲಿ ಕೆಲವು ಔಷಧಿಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೇ, ಸತೀಶ್ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೂ ಕಳುಹಿಸಿದ್ದರು ಎಂದು ಗೊತ್ತಾಗಿದೆ. ಮರಣೋತ್ತರ ಪರೀಕ್ಷೆಯ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರಂತೆ.

ಸತೀಶ್ ನಿಧನದ ಸುದ್ದಿಯನ್ನು ಖ್ಯಾತ ನಟ ಅನುಪಮ್ ಖೇರ್ ಟ್ವೀಟ್ ಮಾಡಿ, ಸಂತಾಪವನ್ನು ವ್ಯಕ್ತ ಪಡಿಸಿದ್ದರು. ಅವರೊಂದಿಗೆ ಕೆಲಸ ಮಾಡಿದ್ದನ್ನೂ ನೆನಪಿಸಿಕೊಂಡಿದ್ದರು. ಕಂಗನಾ ರಣಾವತ್ ನಿರ್ದೇಶನದ ಎಮರ್ಜೆನ್ಸಿ ಸಿನಿಮಾದಲ್ಲಿ ಸತೀಶ್ ನಟಿಸುತ್ತಿದ್ದರು. ಈ ಸಿನಿಮಾದಲ್ಲಿ ಅನುಪಮ್ ಖೇರ್ ಕೂಡ ಪ್ರಮುಖ ಪಾತ್ರಲ್ಲಿ ನಟಿಸಿದ್ದಾರೆ. ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಸತೀಶ್, ನಟನೆಯ ಜೊತೆಗೆ ನಿರ್ದೇಶನವನ್ನೂ ಮಾಡಿದ್ದರು. ಅಲ್ಲದೇ, ಖ್ಯಾತ ನಟರ ಜೊತೆ ತೆರೆಹಂಚಿಕೊಂಡಿದ್ದು ವಿಶೇಷ. ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಹಲವರು ನಿವಾಸಕ್ಕೆ ತೆರಳಿ ಅಂತಿಮ ನಮನ ಸಲ್ಲಿಸಿದ್ದರು. ಇದೀಗ ಸತೀಶ್ ಸಾವು ಅನುಮಾನಕ್ಕೆ ಕಾರಣವಾಗಿದೆ ಎಂದು ಸುದ್ದಿಯಾಗಿದೆ.

Comments

Leave a Reply

Your email address will not be published. Required fields are marked *