ಕೊಡದಲ್ಲಿ ಸಿಲುಕಿಕೊಂಡಿದ್ದ ನಾಯಿಯನ್ನು ರಕ್ಷಿಸಿದ್ರು ಬೆಂಗ್ಳೂರು ಪೊಲೀಸರು

ಬೆಂಗಳೂರು: ಕೊಡದಲ್ಲಿ ಸಿಲುಕಿಕೊಂಡಿದ್ದ ನಾಯಿಯನ್ನು 15 ಮಂದಿ ಕೆಎಸ್ಆರ್‌ಪಿ  ಸಿಬ್ಬಂದಿ ರಕ್ಷಣೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

ಈ ಘಟನೆ ಇದೇ ತಿಂಗಳ 24 ರ ಶುಕ್ರವಾರದಂದು ನಡೆದಿದ್ದು, ನಾಯಿಯನ್ನು ಕಾಪಾಡುತ್ತಿರುವ ಫೋಟೋವನ್ನು ಪೂರ್ವ ವಲಯದ ಡಿಸಿಪಿ ಅಭಿಷೇಕ್ ಗೋಯಲ್ ಟ್ವೀಟ್ ಮಾಡಿ ಹಂಚಿಕೊಂಡಿದ್ದಾರೆ.

ತಮ್ಮ ಟ್ವೀಟ್ ನಲ್ಲಿ ಅಭಿಷೇಕ್ ಗೋಯಲ್, ಮೊದಲು ನಾಯಿಯ ತಲೆಯನ್ನು ಕೊಡದಿಂದ ಬಿಡಿಸಲು ಪ್ರಯತ್ನಿಸಿದ್ದಾರೆ. ಆದರೆ ಈ ಪ್ರಯತ್ನ ವಿಫಲವಾಯ್ತು. ನಂತರ ನಾಯಿಯ ಉಸಿರಾಟಕ್ಕೆ ತೊಂದರೆಯಾಗಬಾರದು ಎಂದು ಮೊದಲಿಗೆ ಕೊಡಕ್ಕೆ ಒಂದು ಸಣ್ಣ ರಂಧ್ರವನ್ನು ಮಾಡಲಾಯಿತು. ನಂತರ ನಿಧಾನವಾಗಿ ಕೊಡವನ್ನು ಕತ್ತರಿಸಿ ನಾಯಿಯನ್ನು ರಕ್ಷಣೆ ಮಾಡಲಾಗಿದೆ ಎಂದು ಬರೆದುಕೊಂಡಿದ್ದಾರೆ.

ಡಿಸಿಪಿ ಅವರು ಮಾಡಿದ ಟ್ವೀಟ್‍ಗೆ ಸಾರ್ವಜನಿಕರು ಮೆಚ್ಚುಗೆ ಸೂಚಿಸಿ ಧನ್ಯವಾದಗಳನ್ನು ತಿಳಿಸಿ ಮರು ಟ್ವೀಟ್ ಮಾಡುತ್ತಿದ್ದಾರೆ.

Comments

Leave a Reply

Your email address will not be published. Required fields are marked *