15 ವರ್ಷದ ದಾಂಪತ್ಯ ಅಂತ್ಯ – ವಿಚ್ಛೇದನಕ್ಕೆ ಮುಂದಾದ ಆಮಿರ್ ಖಾನ್, ಕಿರಣ್ ರಾವ್

ಮುಂಬೈ: ಬಿಟೌನ್ ಸ್ಟಾರ್ ಕಪಲ್ ಆಮಿರ್ ಖಾನ್ ಮತ್ತು ಕಿರಣ್ ರಾವ್ ಮದುವೆ ಬಂಧನದಿಂದ ಹೊರ ಬಂದಿದ್ದು, ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ.

ಆಮಿರ್ ಖಾನ್ ಮತ್ತು ಕಿರಣ್ ರಾವ್ ಜೊತೆಯಾಗಿ ಹೇಳಿಕೆ ಬಿಡುಗಡೆಯಾಗಿದ್ದು, ಇನ್ಮುಂದೆ ಇಬ್ಬರ ದಾರಿ ಬೇರೆ ಆಗಿರಲಿದೆ. ನಾವಿಬ್ಬರು ಪರಸ್ಪರ ಚರ್ಚಿಸಿ ಈ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ಜಂಟಿ ಹೇಳಿಕೆ:
ಈ 15 ವರ್ಷಗಳಲ್ಲಿ ಇಬ್ಬರೂ ಸುಂದರ ಜೀವನವನ್ನು ಕಳೆದಿದ್ದೇವೆ. ಹೊಸ ಅನುಭವ ಆನಂದ, ಸಂತೋಷವನ್ನು ಶೇರ್ ಮಾಡಿಕೊಂಡಿದ್ದೇವೆ. ನಮ್ಮಿಬ್ಬರ ಸಂಬಂಧ ಕೇವಲ ವಿಶ್ವಾಸ, ಗೌರವ ಮತ್ತು ಪ್ರೀತಿಯ ಮೇಲೆಯೇ ಭದ್ರವಾಗಿ ಬೆಳೆದಿದೆ. ಇಂದು ನಾವು ಜೀವನ ಹೊಸ ಅಧ್ಯಾಯ ಆರಂಭಿಸಲು ಹೊರಟಿದ್ದೇವೆ. ಆದ್ರೆ ಗಂಡ-ಹೆಂಡತಿಯಾಗಿ ಅಲ್ಲ. ಬದಲಾಗಿ ತಂದೆ-ತಾಯಿ ಮತ್ತು ವಿಸ್ತೃತ ಕುಟುಂಬದ ರೂಪದಲ್ಲಿ. ನಾವು ಕಳೆದ ಹಲವು ದಿನಗಳಿಂದಲೇ ಪ್ರತ್ಯೇಕವಾಗುವ ಪ್ಲಾನ್ ಆರಂಭಿಸಿದ್ದೇವೆ. ಇಂದು ನಮ್ಮ ನಿರ್ಧಾರವನ್ನು ಸಮಾಜದ ಮುಂದೆ ಅಧಿಕೃತವಾಗಿ ಹೇಳಿಕೊಳ್ಳುತ್ತಿದ್ದೇವೆ ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮುಂದೆ ಜೊತೆಯಾಗಿ ಕೆಲಸ ಮಾಡುತ್ತೇವೆ:
ಪತಿ-ಪತ್ನಿ ರೂಪದಲ್ಲಿ ಪ್ರತ್ಯೇಕವಾದ್ರೂ ಕುಟುಂಬಕ್ಕಾಗಿ ಒಬ್ಬರಿಗೊಬ್ಬರು ಜೊತೆಯಾಗಿರುತ್ತೇವೆ. ಜೊತೆಯಾಗಿಯೇ ಪುತ್ರನ ಪಾಲನೆ-ಪೋಷಣೆ ಮಾಡುತ್ತೇವೆ. ಸಿನಿಮಾ, ನಿರ್ಮಾಣ ಸಂಸ್ಥೆ ಮತ್ತು ಇನ್ನಿತರ ಪ್ರೊಜೆಕ್ಟ್ ಗಳಲ್ಲಿ ಸಹೋದ್ಯೋಗಿಯಾಗಿ ಕಾರ್ಯ ನಿರ್ವಹಿಸುತ್ತೇವೆ. ಕೆಲಸದ ಮಧ್ಯೆ ಸಂಬಂಧವನ್ನು ಅಡ್ಡಿ ತರಲ್ಲ ಎಂದು ಹೇಳಿಕೊಂಡಿದ್ದಾರೆ.

ಕುಟುಂಬ, ಗೆಳೆಯರ ಬಳಗಗಕ್ಕೆ ಧನ್ಯವಾದ:
ಇಷ್ಟು ದಿನ ನಮ್ಮ ಜೊತೆಯಲ್ಲಿದ್ದ ಕುಟುಂಬ ಮತ್ತು ಸ್ನೇಹಿತರಿಗೂ ಧನ್ಯವಾದ. ನಿಮ್ಮ ಸಲಹೆ ಮತ್ತು ಬುದ್ಧಿಮಾತುಗಳಿಂದಲೇ ಇಷ್ಟು ದಿನ ನಮ್ಮಿಬ್ಬರ ಸಂಬಂಧ ಸದೃಢವಾಗಿತ್ತು. ನಿಮ್ಮ ಶುಭ ಹಾರೈಕೆಗಳಿಂದಲೇ ಇಲ್ಲಿಯವರೆಗೆ ಬಂದಿದ್ದೇವೆ. ಈ ವಿಚ್ಛೇದನವನ್ನು ಅಂತ್ಯ ಎಂದು ತಿಳಿಯದೇ ಹೊಸ ಬದುಕಿನ ಆರಂಭ ಎಂದು ತಿಳಿಯುತ್ತೀರಿ ಅಂತ ಭಾವಿಸುತ್ತೇವೆ.

ಲಗಾನ್ ಚಿತ್ರದ ವೇಳೆ ಪ್ರೇಮಾಂಕುರ:
ಲಗಾನ್ ಚಿತ್ರದ ವೇಳೆ ಆಮೀರ್ ಖಾನ್ ಮತ್ತು ಕಿರಣ್ ರಾವ್ ಪ್ರೇಮಪಾಶದಲ್ಲಿ ಬಂಧಿಯಾಗಿದ್ದರು. ಡಿಸೆಂಬರ್ 28, 2005ರಂದು ಮದುವೆಯಾಗಿದ್ದ ಜೋಡಿಗೆ ಅಜಾದ್ ಎಂಬ ಗಂಡು ಮಗುವಿದೆ. ಈ ಮೊದಲು ಆಮಿರ್ ಖಾನ್ ರೀನಾ ದತ್ತಾರನ್ನು ಮದುವೆಯಾಗಿದ್ದರು.

Comments

Leave a Reply

Your email address will not be published. Required fields are marked *