ಪಾಟ್ನಾ: ಕೊರೊನಾ ತಡೆಗಾಗಿ ರಾಜ್ಯ ಸರ್ಕಾರಗಳು ಲಾಕ್‍ಡೌನ್ ಅಸ್ತ್ರವನ್ನು ಮರುಬಳಕೆ ಮಾಡಲು ಮುಂದಾಗಿವೆ. ಜುಲೈ 16ರಿಂದ 31ರವರೆಗೆ ಬಿಹಾರ ಸಂಪೂರ್ಣ ಲಾಕ್‍ಡೌನ್ ಆಗಲಿದೆ.
ಬಿಹಾರ ರಾಜ್ಯದ ಮಹಾನಗರು, ಜಿಲ್ಲಾ ಕೇಂದ್ರ, ತಾಲೂಕುಗಳು ಸಂಪೂರ್ಣವಾಗಿ ಬಂದ್ ಆಗಲಿವೆ. 15 ದಿನದ ಲಾಕ್‍ಡೌನ್ ಕುರಿತ ಮಾರ್ಗಸೂಚಿಯನ್ನು ಸರ್ಕಾರ ಸಿದ್ಧಪಡಿಸಿದೆ. ಕೊರೊನಾ ವೈರಸ್ ತಡೆಗೆ ಇದುವರೆಗೂ ಯಾವುದೇ ಔಷಧಿ ಸಿಕ್ಕಿಲ್ಲ. ಮಹಾಮಾರಿಯಿಂದ ದೂರ ಉಳಿಯಬೇಕಾದ್ರೆ ಸಾರ್ವಜನಿಕರು ಮಾಸ್ಕ್ ಹಾಕುವುದರ ಜೊತೆಗೆ ಕೋವಿಡ್ ನಿಯಮಗಳನ್ನು ಪಾಲಿಸಿ ಎಂದು ಬಿಹಾರ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ತಿಳಿಸಿದ್ದಾರೆ.

ಸೋಮವಾರ ರಾಜ್ಯ ಬಿಜೆಪಿಯ 75 ನಾಯಕರು ಕೋವಿಡ್ ಪರೀಕ್ಷೆಗೆ ಒಳಾಗಿದ್ದರು. 75 ರಲ್ಲಿ 25 ನಾಯಕರಿಗೆ ಸೋಂಕು ತಗುಲಿರೋದು ದೃಢಪಟ್ಟಿದೆ. ಎಲ್ಲರೂ ವೈದ್ಯರ ಸಲಹೆಯ ಮೇರೆ ಹೋಂ ಐಸೋಲೇಶನ್ ನಲ್ಲಿದ್ದಾರೆ. ಈ ಮೊದಲು ಬಿಹಾರದ ಹಲವು ಶಾಸಕರಿಗೆ ಕೊರೊನಾ ಸೋಂಕು ತಗುಲಿತ್ತು. ಆರ್‍ಜೆಡಿಯ ರಾಷ್ಟ್ರೀಯ ಉಪಾಧ್ಯಕ್ಷ ರುಘುವಂಶ್ ಪ್ರಸಾದ್ ಸಿಂಗ್ ಅವರಿಗೂ ಸೋಂಕು ತಗುಲಿದೆ.

Leave a Reply