140 ಕೋಟಿ ಭಾರತೀಯರು ನಿಮ್ಮ ಪರವಾಗಿದ್ದಾರೆ: ಟೀಂ ಇಂಡಿಯಾಗೆ ಮೋದಿ ಶುಭಹಾರೈಕೆ

ನವದೆಹಲಿ: ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧ ವಿಶ್ವಕಪ್ ಫೈನಲ್‌ನಲ್ಲಿ ಸೆಣಸುತ್ತಿರುವ ‘ಮೆನ್ ಇನ್ ಬ್ಲೂ’ (ಟೀಂ ಇಂಡಿಯಾ) ಯಶಸ್ಸಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಶುಭ ಹಾರೈಸಿದ್ದಾರೆ.

ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಪ್ರಧಾನಿ ಮೋದಿ, 140 ಕೋಟಿ ಭಾರತೀಯರು ಐದು ಬಾರಿ ವಿಶ್ವ ಚಾಂಪಿಯನ್‌ಗಳ ವಿರುದ್ಧ ಮೈದಾನಕ್ಕಿಳಿದಿರುವಾಗ ತಂಡದ ಪರವಾಗಿ ನಿಂತಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೂರು ಫೈನಲ್‌ ಪೈಕಿ ಟಾಸ್‌ ಸೋತ ಎರಡರಲ್ಲಿ ಭಾರತ ಚಾಂಪಿಯನ್‌ – ಈ ಬಾರಿ ಏನಾಗಬಹುದು?

ನಾಯಕ ರೋಹಿತ್ ಶರ್ಮಾ ಮತ್ತು ಅವರ ನಿಲುವುಗಳು ಕ್ರೀಡಾಸ್ಫೂರ್ತಿಯನ್ನು ಎತ್ತಿಹಿಡಿಯುವಂತಿದೆ. ಯಾವುದೇ ಘರ್ಷಣೆಯಲ್ಲಿ ತೀವ್ರ ಪೈಪೋಟಿ ನೀಡುತ್ತವೆ ಎಂದು ಮೋದಿ ಅವರು ಆಶಿಸಿದ್ದಾರೆ.

ಅಭಿನಂದನೆಗಳು ಟೀಂ ಇಂಡಿಯಾ! 140 ಕೋಟಿ ಭಾರತೀಯರು ನಿಮಗಾಗಿ ಹುರಿದುಂಬಿಸುತ್ತಿದ್ದಾರೆ. ನೀವು ಪ್ರಕಾಶಮಾನವಾಗಿ ಮಿಂಚಲಿ, ಉತ್ತಮವಾಗಿ ಆಡಲಿ ಮತ್ತು ಕ್ರೀಡಾ ಮನೋಭಾವವನ್ನು ಎತ್ತಿ ಹಿಡಿಯಲಿ ಎಂದು ಪ್ರಧಾನಿ ಮೋದಿ ಆಶಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಟಾಸ್ ಗೆದ್ದ ಆಸೀಸ್; ಫೀಲ್ಡಿಂಗ್ ಆಯ್ಕೆ- ಭಾರತ ಮೊದಲು ಬ್ಯಾಟಿಂಗ್

ವಿಶ್ವಕಪ್ ಪಂದ್ಯಗಳುದ್ದಕ್ಕೂ ನಮ್ಮ ತಂಡವು ಅಸಾಧಾರಣ ವಿಜಯದ ದಾಖಲೆಗಳನ್ನು ಮಾಡಿದೆ. ವಿಶ್ವದಾದ್ಯಂತ 140 ಕೋಟಿ ನಾಗರಿಕರು ಮತ್ತು ಕ್ರಿಕೆಟ್ ಅಭಿಮಾನಿಗಳು ಅವರ ಬೆಂಬಲಕ್ಕೆ ನಿಂತಿದ್ದಾರೆ. ತಂಡಕ್ಕೆ ನನ್ನ ಶುಭಾಶಯಗಳು. ಹೋಗಿ ವಿಶ್ವಕಪ್ ಗೆಲ್ಲಿರಿ ಎಂದು ಅಮಿತ್‌ ಶಾ (Amit Shah) ಎಕ್ಸ್‌ನಲ್ಲಿ ಶುಭ ಹಾರೈಸಿದ್ದಾರೆ.

ಟಾಸ್‌ ಗೆದ್ದ ಆಸ್ಟ್ರೇಲಿಯಾ (Australia) ಫೀಲ್ಡಿಂಗ್‌ ಆಯ್ದುಕೊಂಡಿದೆ. ಬ್ಯಾಟಿಂಗ್‌ ನಡೆಸುತ್ತಿರುವ ಭಾರತ (India) 3 ವಿಕೆಟ್‌ ನಷ್ಟಕ್ಕೆ 81 ರನ್‌ ಗಳಿಸಿ ಆಡುತ್ತಿದೆ.