ವಿವಾದಗಳ ಮೂಲಕವೇ ಫೇಮಸ್ ಆಗಿರುವ ಬಾಲಿವುಡ್ ನಟ, ಸ್ವಯಂ ವಿಮರ್ಶಕ ಕಮಾಲ್ ಆರ್ ಖಾನ್ ಅವರನ್ನು ಇಂದು ಮುಂಬೈ ಪೊಲೀಸರು ಬಂಧಿಸಿ, ನ್ಯಾಯಾಲಕ್ಕೆ ಹಾಜರು ಪಡಿಸಿದ್ದರು. ಬೊರಿವಲಿ ನ್ಯಾಯಾಲಯವು ಕಮಾಲ್ ಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. 2020ರಲ್ಲಿ ರಾಹುಲ್ ಕನ್ವಾಲ್ ಎನ್ನುವವರ ವಿರುದ್ಧ ದ್ವೆಷಪೂರ್ಣ ಟ್ವಿಟ್ ಮಾಡಿದ್ದರು ಎನ್ನುವ ಕಾರಣಕ್ಕಾಗಿ ಕಮಾಲ್ ಅವರನ್ನು ಮುಂಬೈ ಪೊಲೀಸರು ಇಂದು ಬಂಧಿಸಿದ್ದರು.

ಶಿವಸೇನಾ ಪಕ್ಷದ ಸದಸ್ಯರಾಗಿರುವ ರಾಹುಲ್ ಕನ್ವಾಲ್ ವಿರುದ್ಧ 2020ರಲ್ಲಿ ಕಮಾಲ್, ಮಾನಹಾನಿ ಆಗುವಂತಹ ಬರಹವನ್ನು ಟ್ವಿಟ್ ಮಾಡಿದ್ದರಂತೆ. ಆಗ ರಾಹುಲ್, ಮುಂಬೈನ ಮಲಾಡ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ಆಗ ಕಮಾಲ್ ದೇಶದಲ್ಲಿ ಇರದೇ ಇರುವ ಕಾರಣಕ್ಕಾಗಿ ಬಂಧನ ಸಾಧ್ಯವಾಗಿರಲಿಲ್ಲ. ಇದೀಗ ಕಮಾಲ್, ಮುಂಬೈ ಏರ್ ಪೋರ್ಟಿಗೆ ಬರುತ್ತಿದ್ದಂತೆಯೇ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ:ದುಬಾರಿ ಸಂಭಾವನೆ ಕೇಳಿ, ಅವಕಾಶ ಕಳೆದುಕೊಂಡ `ವಜ್ರಕಾಯ’ ನಟಿ ನಭಾ ನಟೇಶ್

ಕನ್ನಡದ ಕೆಜಿಎಫ್ 2, ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಸಿನಿಮಾವನ್ನು ಜಗತ್ತೇ ಹೊಗಳುತ್ತಿದ್ದಾಗ ಇವು ಕಳಪೆ ಸಿನಿಮಾಗಳು, ಇಂತಹ ಸಿನಿಮಾಗಳನ್ನು ಹೊಗಳುತ್ತಿರುವವರಿಗೆ ತಲೆ ಸರಿ ಇಲ್ಲ ಎನ್ನುವಂತೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು ಕಮಾಲ್. ಅಲ್ಲದೇ, ತಮ್ಮ ಜೀವನದ ಅನೇಕ ಖಾಸಗಿ ಸಂಗತಿಗಳನ್ನು ಕಮಾಲ್ ಬರೆದುಕೊಂಡು ಸುದ್ದಿ ಆಗುತ್ತಿದ್ದರು. ಇದೀಗ ಬಂಧನವಾಗಿ ಸುದ್ದಿಯಾಗಿದ್ದಾರೆ.

Leave a Reply