14 ವರ್ಷದವಳ ಮೇಲೆ ಸಂಬಂಧಿಯಿಂದ್ಲೇ ನಿರಂತರ ಅತ್ಯಾಚಾರ- ಬಾಲಕಿಯ ರಕ್ಷಣೆ

ಜೈಪುರ್: 14 ವರ್ಷದ ಬಾಲಕಿ ಮೇಲೆ ಸಂಬಂಧಿಯೊಬ್ಬ ನಿರಂತರವಾಗಿ ಅತ್ಯಚಾರ ಮಾಡಿ, ಕಟ್ಟಡ ನಿರ್ಮಾಣದ ಕೆಲಸಗಳಲ್ಲಿ ದುಡಿಸಿಕೊಳ್ಳುತ್ತಿದ್ದ ಅಮಾನವೀಯ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ಜೈಸಲ್ಮೇರ್ ಜಿಲ್ಲೆಯಾ ಪೂಕರೆನ್ ನಲ್ಲಿ ಘಟನೆ ನಡೆದಿದೆ. 14 ವರ್ಷದ ಬಾಲಕಿಯನ್ನು ಘಟನೆ ನಡೆದ 22 ದಿನಗಳ ಬಳಿಕ ಪೊಲೀಸರು ರಕ್ಷಣೆ ಮಾಡಿದ್ದಾರೆ.

ಅತ್ಯಾಚಾರ ಮಾಡಿದ 49 ವರ್ಷ ಪ್ರಾಯದ ಆರೋಪಿಯನ್ನು ಬಂಧಿಸಲಾಗಿದ್ದು, ಬಾಲಕಿಯನ್ನು ಕೋಟಾದಲ್ಲಿರುವ ಆಶ್ರಯ ತಾಣಕ್ಕೆ ಕಳುಹಿಸಲಾಗಿದೆ. ಕೆಲದಿನಗಳಲ್ಲಿ ಬಾಲಕಿಯನ್ನು ಮಕ್ಕಳ ಕಲ್ಯಾಣ ಇಲಾಖೆಗೆ ಒಪ್ಪಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸ್ಥಳೀಯ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

ಬಾಲಕಿಯನ್ನು ನಿರಂತರ ಅತ್ಯಾಚಾರಗೈದು ಬಳಿಕ ಆಕೆಯನ್ನು ಕಟ್ಟಡ ನಿರ್ಮಾಣ ಕೆಲಸದಲ್ಲಿ ದುಡಿಸಿಕೊಂಡ ಆರೋಪದಲ್ಲಿ ಪೊಕರೆನ್‍ನ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಇಟಾವದ ಉಪ ಪೊಲೀಸ್ ವರಿಷ್ಠಾಧಿಕಾರಿ ವಿಜಯಶಂಕರ್ ಶರ್ಮಾ ತಿಳಿಸಿದ್ದಾರೆ.

ಆರೋಪಿಯನ್ನು ಈಗಾಗಲೇ ಬಂಧಿಸಿ ಪೋಕ್ಸೋ ಕಾಯ್ದೆಯಡಿಯಲ್ಲಿ ಕೇಸ್ ದಾಖಲಿಸಲಾಗಿದೆ. ಆರೋಪಿಯನ್ನು ಕೋರ್ಟಿಗೆ ಹಾಜರುಪಡಿಸುವ ಮೊದಲು ಒಂದು ದಿನ ಪೊಲೀಸ್ ಕಸ್ಟಡಿಯಲ್ಲಿ ಇರಿಸಲಾಗಿದೆ ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *