ಅಕ್ರಮವಾಗಿ ಬಾಂಗ್ಲಾಕ್ಕೆ ಜಲಪ್ರವೇಶ- 135 ಭಾರತೀಯ ಮೀನುಗಾರರ ಬಂಧನ

ಢಾಕಾ: ಬಾಂಗ್ಲಾ ಕೊಲ್ಲಿಯಿಂದ ಅಕ್ರಮವಾಗಿ ಬಾಂಗ್ಲಾದೇಶದ ಜಲ ಪ್ರದೇಶವನ್ನು ಪ್ರವೇಶಿಸಿದ್ದ ಬಾಂಗ್ಲಾದೇಶ ನೌಕಾಪಡೆಯು 135 ಭಾರತೀಯ ಮೀನುಗಾರರನ್ನು ಬಂಧಿಸಿ 8 ಮೀನುಗಾರಿಕೆ ಟ್ರಾಲರ್‌ಗಳನ್ನು ವಶಪಡಿಸಿಕೊಂಡಿದೆ.

ಆಳ ಸಮುದ್ರದಲ್ಲಿ ಗಸ್ತು ತಿರುಗುತ್ತಿದ್ದಾಗ ನೌಕಾಪಡೆ ಸಿಬ್ಬಂದಿ 2 ಬಾರಿ ದಾಳಿ ನಡೆಸಿ ಭಾರತೀಯ ಮೀನುಗಾರರನ್ನು ವಶಕ್ಕೆ ಪಡೆದರು. ನೌಕಾಪಡೆಯ ಹಡಗುಗಳಾದ ಬನೌಹಾ ಪ್ರತ್ಯ ಮತು ಅಲಿ ಹೈದರ್ ಸಮುದ್ರದಲ್ಲಿ ಗಸ್ತು ತಿರುಗುತ್ತಿದ್ದು, ಈ ಸಂದರ್ಭದಲ್ಲಿ ಮೊದಲ ಹಂತದಲ್ಲಿ 4 ಟ್ರಾಲರ್‌ಗಳೊಂದಿಗೆ 68 ಭಾರತೀಯ ಮೀನುಗಾರರನ್ನು ಬಂಧಿಸಲಾಗಿದೆ.

ಇದಾದ ಬಳಿಕ ಅದೇ ತಂಡ ಮತ್ತೊಂದು ಕಾರ್ಯಾಚರಣೆಯಲ್ಲಿ ನೌಕಾಪಡೆಯ ಇನ್ನೂ 67 ಮೀನುಗಾರರನ್ನು ವಶಕ್ಕೆ ಪಡೆದುಕೊಂಡಿದೆ ಹಾಗೂ 4 ಟ್ರಾಲರ್‌ಗಳನ್ನು ವಶಪಡಿಸಿಕೊಂಡಿದೆ. ಮೀನು ಸೇರಿದಂತೆ ವಶಪಡೆಸಿಕೊಂಡ ವಸ್ತುಗಳ ಮಾರುಕಟ್ಟೆ ಮೌಲ್ಯ 3.80 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್‍ಗೆ ಸೇರ್ಪಡೆಗೊಂಡ ಕೊತ್ತೂರು ಮಂಜುನಾಥ್, ಎಂ.ಸಿ. ಸುಧಾಕರ್

4 ಟ್ರಾಲರ್‌ಗಳು ಸೇರಿದಂತೆ 6 ಮೀನುಗಾರರನ್ನು ನೌಕಾಪಡೆ ಹಸ್ತಾಂತರಿಸಿದೆ ಎಂದು ಮೊಂಗ್ಲಾ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ. ಬಾಂಗ್ಲಾದೇಶದ ಜಲಪ್ರದೇಶವನ್ನು ಅಕ್ರಮವಾಗಿ ಪ್ರವೇಶಿಸಿ ಮೀನುಗಾರಿಕೆ ನಡೆಸಿದ ಬಗ್ಗೆ ಪೊಲೀಸ್ ವರದಿಯನ್ನು ದಾಖಲಿಸಲಾಗಿದೆ. ಬಂಧಿತ ಭಾರತೀಯ ಮೀನುಗಾರರನ್ನು ಬಾಗರ್‍ಹತ್ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಜೈಲಿಗೆ ಕಳುಹಿಸಿದೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದರು. ಇದನ್ನೂ ಓದಿ: ನಾಳೆ ಬಿಜೆಪಿ-ಶಿಂಧೆ ಸರ್ಕಾರ ರಚನೆ ಸಾಧ್ಯತೆ- ಹೊಸ ಸರ್ಕಾರ ರಚನೆ ಉಸ್ತುವಾರಿ ಹೊತ್ತ ಸಿ.ಟಿ ರವಿ

Live Tv

Comments

Leave a Reply

Your email address will not be published. Required fields are marked *