ಮರ್ಯಾದಾ ಹತ್ಯೆ: 13 ವರ್ಷದ ಹಿಂದೆ ಮದ್ವೆಯಾದ ದಂಪತಿಯನ್ನು ಕೊಂದೇ ಬಿಟ್ಟ!

ಗದಗ: ಜಿಲ್ಲೆಯಲ್ಲಿ ಮತ್ತೊಂದು ಮರ್ಯಾದಾ ಹತ್ಯೆ ನಡೆದಿದ್ದು, ಮಹಿಳೆಯ ಸಹೋದರನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಶಿರಹಟ್ಟಿ ತಾಲೂಕಿನ ಬಸಾಪುರದಲ್ಲಿ ನಡೆದಿದೆ.

ಅಶ್ರಫ್ ಅಲಿ ದೊಡ್ಡಮ್ಮನಿ(45), ಸೋಮವ್ವ (38) ಮೃತ ದುರ್ದೈವಿಗಳು. ಕಳೆದ 13 ವರ್ಷದ ಹಿಂದೆ ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. 13 ವರ್ಷದ ನಂತರ ಮಹಿಳೆ ಪಾಲಕರನ್ನ ನೋಡಲು ತವರಿಗೆ ಬಂದಿದ್ದರು. ಈ ವೇಳೆ ಮಹಿಳೆಯ ಸಹೋದರ ದೇವಪ್ಪ ಹೊಟ್ಟಿ ಮಾರಕಾಸ್ತ್ರದಿಂದ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ ಶಿರಹಟ್ಟಿ ಪೊಲೀಸರಿಗೆ ಶರಣಾಗತಿಯಾಗಿದ್ದಾನೆ. ಇದನ್ನು ಓದಿ: ಮರ್ಯಾದಾ ಹತ್ಯೆ: ಗರ್ಭಿಣಿ ಪತ್ನಿಯ ಎದುರೇ ಪತಿಯ ತಲೆಗೆ ಮಚ್ಚಿನಿಂದ ಏಟು

ಇದೇ ತಿಂಗಳು ಹೈದಾರಾಬಾದ್‍ನಲ್ಲಿ ಮರ್ಯಾದೆ ಹತ್ಯೆ ನಡೆದಿತ್ತು. ಪ್ರಣಯ್ ಕುಮಾರ್ ಹಾಗೂ ಅಮೃತ ಎಂಬವರು 8 ತಿಂಗಳ ಹಿಂದೆ ಪ್ರೀತಿಸಿದ್ದ ಅವರಿಬ್ಬರು ಮದುವೆ ಮಾಡಿಕೊಂಡಿದ್ದರು. ಇಬ್ಬರ ಜಾತಿ ಬೇರೆಯಾಗಿದ್ದರಿಂದ ಅಮೃತಾ ಮನೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದರೂ ಯುವ ಜೋಡಿ ಮನೆಯವರ ವಿರೋಧದ ನಡುವೆಯೂ ಮದುವೆ ಆಗಿದ್ದರು. ಸೆಪ್ಟೆಂಬರ್ 15 ರಂದು ಪ್ರಣಯ್ ಮತ್ತು ಅಮೃತಾ ಆಸ್ಪತ್ರೆ ಮುಂದೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ವ್ಯಕ್ತಿಯೊಬ್ಬ ಮಚ್ಚಿನಿಂದ ಪ್ರಣಯ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *