13ನೇ ವಯಸ್ಸಿಗೆ ಬಾಲಕಿ ಗರ್ಭಿಣಿ – ಹೊಟ್ಟೆನೋವಿನಿಂದ ಸಾವು

ಕಲಬುರಗಿ: 13 ವರ್ಷದ ಗರ್ಭಿಣಿ ಬಾಲಕಿ (Pregnant Girl) ಹೊಟ್ಟೆನೋವಿನಿಂದ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ಕಲಬುರಗಿ (Kalaburagi) ನಗರದ ಸಬ್ ಅರ್ಬನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸರ್ಫರಾಜ್ ಎಂಬಾತ 13 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಜೀವ ಬೆದರಿಕೆ ಹಾಕಿ ಬಾಲಕಿ ಮೇಲೆ ನಿರಂತರ ಅತ್ಯಾಚಾರ ಮಾಡಿದ್ದು, ಗರ್ಭಿಣಿಯಾದ ಬಳಿಕ ವಿಷಯ ಬೆಳಕಿಗೆ ಬಂದಿದೆ. ಇದನ್ನೂ ಓದಿ: ವಾಲ್ಮೀಕಿ ನಿಗಮ ಹಗರಣ; ನಕಲಿ ಅಕೌಂಟ್‌ನ ಅಸಲಿ ಮಾಲೀಕರ ಪತ್ತೆ ಮಾಡಿದ ಸಿಐಡಿ

ಶುಕ್ರವಾರ ಹೊಟ್ಟೆನೋವಿನಿಂದ ಬಳಲುತ್ತಿದ್ದ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆಯನ್ನು ಪರೀಕ್ಷಿಸಿದ ವೈದ್ಯರು ಗರ್ಭಿಣಿಯಾಗಿರುವುದಾಗಿ ತಿಳಿಸಿದ್ದರು. ಹೊಟ್ಟೆನೋವಿನಿಂದ ಬಾಲಕಿ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾಳೆ. ಅತ್ಯಾಚಾರ ಎಸಗಿದ ಆರೋಪಿ ಸರ್ಫರಾಜ್ ಮಿರ್ಜಾನನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಎಕ್ಸ್‌ಪ್ರೆಸ್‌ವೇನಲ್ಲಿ ರಾಂಗ್‌ ರೂಟ್‌ನಲ್ಲಿ ಬಂದ ಕಾರಿನಿಂದ ಭೀಕರ ಅಪಘಾತ – 6 ಮಂದಿ ಸ್ಥಳದಲ್ಲೇ ಸಾವು