ಮರಿಯಪ್ಪನ ಪಾಳ್ಯದಲ್ಲಿ ಸಿಲಿಂಡರ್ ದುರಂತ- 13 ಜನರಿಗೆ ಗಾಯ

ಬೆಂಗಳೂರು: ಅವ್ರೆಲ್ಲ ಬೆಳಗ್ಗಿನ ಜಾವದ ಸಿಹಿನಿದ್ದೆಯಲ್ಲಿದ್ದರು. ಆದರೆ ಇಡೀ ಮನೆಯನ್ನು ನಡುಗಿಸುವ ಅದೊಂದು ಸ್ಫೋಟದ ಸದ್ದು ಮನೆಯವರ ನಿದ್ದೆ ಮಾತ್ರವಲ್ಲ ಅವರ ಜೀವಕ್ಕೆ ಕಂಟಕವಾಗಿದೆ. ಪುಟ್ಟ ಮಕ್ಕಳಿಂದ ಹಿಡಿದು ಮನೆಯಲ್ಲಿ 13 ಜನ ವಿಲವಿಲನೇ ಒದ್ದಾಡಿ ನರಳಾಡಿದ್ರು. ಮುಂಜಾವಿನಲ್ಲಿ ಬೆಂಗಳೂರಿನಲ್ಲಿ ನಡೆದ ಸಿಲಿಂಡರ್ ಸ್ಫೋಟ (Cylinder Blast In Mariyappan Palya) ದುರಂತದ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ.

ಒಬ್ಬರಲ್ಲ ಇಬ್ಬರಲ್ಲ ಬರೋಬ್ಬರಿ 13 ಜನ. ಅದರಲ್ಲೂ 6 ಜನ ಪುಟ್ಟ ಮಕ್ಕಳು. ಸವಿ ಕನಸಿನ ನಿದ್ದೆಯಲ್ಲಿದ್ದ ಮನೆಯವರಿಗೆ ಅದೊಂದು ಸ್ಫೋಟದ ಸದ್ದು ನಡುಗಿಸಿತ್ತು. ಇಂದು ಬೆಳಗ್ಗೆ ಮನೆಯಲ್ಲಿ ಪುಟ್ಟದೊಂದು ಫಂಕ್ಷನ್ ಇಟ್ಟುಕೊಂಡಿದ್ರಿಂದ ಮನೆಯ ತುಂಬಾ ಸಂಬಂಧಿಕರು ಇದ್ರು. ಏಕಾಏಕಿ ಸಿಲಿಂಡರ್ ಸ್ಫೋಟದ ಪರಿಣಾಮ ಇಡೀ ಮನೆಯಲ್ಲಿದ್ದ 13 ಜನ ಗಾಯಗೊಂಡರು. ಮನೆ ಗೋಡೆ ಸ್ಫೋಟದ ರಭಸಕ್ಕೆ ಛಿದ್ರ ಛಿದ್ರಗೊಂಡಿದೆ. ಅಂದ ಹಾಗೆ ಈ ಘಟನೆ ನಡೆದಿದ್ದು ಬೆಂಗಳೂರಿನ ಮರಿಯಪ್ಪನ ಪಾಳ್ಯದಲ್ಲಿ. ತಕ್ಷಣ 13 ಜನರನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಸ್ಫೋಟದ ರಭಸಕ್ಕೆ ಮನೆಯ ಫರ್ನಿಚರ್ ಟಿವಿ ಎಲ್ಲವೂ ಸುಟ್ಟು ಕರಕಲಾಗಿದೆ. ತಕ್ಷಣ ಗಾಯಗೊಂಡವರನ್ನು ಆಸ್ಪತ್ರೆಗೆ ಶಿಫ್ಟ್ ಮಾಡಲು ಅಂಬುಲೆನ್ಸ್ ಗೆ ಕರೆ ಮಾಡಿದ್ರೂ ಅಂಬುಲೆನ್ಸ್ ಸ್ಥಳಕ್ಕೆ ಬಂದಿರಲಿಲ್ಲ. ಇದ್ರಿಂದ ಸಾರ್ವಜನಿಕರು ಆಕ್ರೋಶಗೊಂಡ್ರು. ತುರ್ತು ಪರಿಸ್ಥಿತಿಯಲ್ಲಿ 108 ಕೈಕೊಟ್ಟಿದ್ರಿಂದ ದುಡ್ಡು ಕೊಟ್ಟು ಖಾಸಗಿ ಅಂಬುಲೆನ್ಸ್ ನಲ್ಲಿ ಹೋಗಿದ್ದಾಗಿ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಮಂಗಳೂರು ಜ್ಯುವೆಲ್ಲರಿ ಶಾಪ್‍ಗೆ ನುಗ್ಗಿ ಸಿಬ್ಬಂದಿ ಹತ್ಯೆ ಪ್ರಕರಣ- ಆರೋಪಿ ಅರೆಸ್ಟ್

ಸದ್ಯ ವಿಕ್ಟೋರಿಯಾ ಆಸ್ಪತ್ರೆ (Victoria Hospital) ಯಲ್ಲಿ ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಗ್ಯಾಸ್ ಏಜೆನ್ಸಿಗೆ ಗ್ಯಾಸ್ ಲೀಕ್ ಸ್ಫೋಟದ ಬಗ್ಗೆ ಗಮನಕ್ಕೆ ತಂದ್ರೂ ಅವರ ಅವರವರ ತಪ್ಪು ಮುಚ್ಚಿಕೊಳ್ಳಲು ಯತ್ನಿಸುತ್ತಿದ್ದಾರೆ ಅಂತಾ ಕುಟುಂಬಸ್ಥರು ಹೇಳಿದ್ರು. ಒಟ್ಟಾರೆ ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಮಹಾ ದುರಂತವೊಂದು ನಡೆದುಹೋಗಿದೆ.

Comments

Leave a Reply

Your email address will not be published. Required fields are marked *