ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ಸೋಮ್ಲಾಪುರದ ಗ್ರಾಮದಲ್ಲಿ ನಾಗರಹಾವನ್ನು ಅಟ್ಟಿಸಿಕೊಂಡು ಬಂದು ಅದು ಕೈತಪ್ಪಿದರಿಂದ 13 ಅಡಿ ಉದ್ದದ ಕಾಳಿಂಗ ಸರ್ಪ ಕಳೆದೊಂದು ವಾರದಿಂದ ಅಡಿಕೆ ಮರದ ಲಾಟಿನಲ್ಲೇ ವಾಸವಾಗಿದೆ.
ಚೈತ್ರಕುಮಾರ್ ಅವರ ಮನೆ ಮುಂದೆ ಅಡಿಕೆ ಮರಗಳನ್ನು ಕಡಿದು ಲಾಟು ಹಾಕಿದ್ದಾರೆ. ಕಳೆದೊಂದು ವಾರದ ಹಿಂದೆ ಕಾಳಿಂಗ ಸರ್ಪವೊಂದು ನಾಗರಹಾವನ್ನು ಅಟ್ಟಿಸಿಕೊಂಡು ಬಂದಿತ್ತು. ಈ ವೇಳೆ ನಾಗರಹಾವು ಅಡಿಕೆ ಮರಗಳ ಮಧ್ಯೆ ಸೇರಿತ್ತು. ಆಗ ಅಡಿಕೆ ಮರಗಳೊಳಗೆ ಹೋದ ಕಾಳಿಂಗ ಒಂದು ವಾರದಿಂದ ಅಲ್ಲೇ ವಾಸವಿದೆ.

ಇದನ್ನು ನೋಡಿದ ಮನೆಯವರು ಹಾಗೂ ಸ್ಥಳೀಯರು ನಾಗರಹಾವು ಹಾಗೂ ಕಾಳಿಂಗ ಎರಡೂ ಒಂದೇ ಜಾಗದಲ್ಲಿ ಬಹಳ ದಿನ ಇರೋದಿಲ್ಲ, ಹೋಗಿವೆ ಎಂದು ಸುಮ್ಮನಾಗಿದರು. ಆದರೆ ಸೋಮವಾರ ಹೊರಬಂದ ಕಾಳಿಂಗನನ್ನು ನೋಡಿ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.
ಗ್ರಾಮಸ್ಥರು ಕೂಡಲೇ ಸ್ನೇಕ್ ಹರೀಂದ್ರಾರನ್ನು ಕರೆಸಿ ಕಾಳಿಂಗನನ್ನು ಸೆರೆಹಿಡಿದಿದ್ದಾರೆ. ಅರಣ್ಯ ಅಧಿಕಾರಿಗಳ ನೇತೃತ್ವದಲ್ಲಿ ಒಂದು ಗಂಟೆಯ ಕಾರ್ಯಚರಣೆ ನಡೆಸಿ ಸೆರೆ ಹಿಡಿದ ಕಾಳಿಂಗನನ್ನು ಸ್ಥಳೀಯ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Leave a Reply