ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ಪಾಲಿಕೆಗಳಿಗೆ 125 ಕೋಟಿ ಅನುದಾನ

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (Greater Bengalruu Authority) ಅಡಿ ರಚನೆಯಾಗಿರುವ ಐದು ಪಾಲಿಕೆಗಳಿಗೆ ರಾಜ್ಯ ಸರ್ಕಾರ 125 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ.

ಹೊಸದಾಗಿ ರಚನೆಯಾಗಿರುವ ಐದು ಪಾಲಿಕೆಗಳಿಗೆ ತಲಾ 25 ಕೋಟಿ ರೂ.ಯಂತೆ 125 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಆರಂಭಿಕ ಹಂತದಲ್ಲಿ ಪಾಲಿಕೆಗಳ ದೈನಂದಿನ ಆಡಳಿತಾತ್ಮಕ ಮತ್ತು ಇತರೆ ವೆಚ್ಚಗಳಿಗಾಗಿ ಅನುದಾನ ಅಗತ್ಯವಿದೆ. ಹೀಗಾಗಿ ನಗರಾಭಿವೃದ್ಧಿ ಇಲಾಖೆಯಿಂದ 125 ಕೋಟಿ ರೂ. ಬಿಡುಗಡೆಯಾಗಿದೆ.ಇದನ್ನೂ ಓದಿ:ಬ್ಯಾಗ್ ಇಡುವ ನೆಪದಲ್ಲಿ ಖಾಸಗಿ ಅಂಗಕ್ಕೆ ಕೈ ಹಾಕಿ ವಿಕೃತಿ – ಆಟೋ ಚಾಲಕ ಅರೆಸ್ಟ್

ಪ್ರಸ್ತುತ ಸಂಗ್ರಹ ಆಗುತ್ತಿರುವ ಆಸ್ತಿ ತೆರಿಗೆಯ ಹಣ ಸರ್ಕಾರದ ಸುಪರ್ದಿಯಲ್ಲಿದೆ. ಸಂಗ್ರಹವಾದ ತೆರಿಗೆ ಹಣ ಇನ್ನೂ ಹೊಸ ಪಾಲಿಕೆಗಳ ಬ್ಯಾಂಕ್ ಅಕೌಂಟ್‌ಗೆ ಬರುತ್ತಿಲ್ಲ. ಹೀಗಾಗಿ ಅದೆಲ್ಲವೂ ಸರ್ಕಾರದ ಸುಪರ್ದಿಯಲ್ಲಿದೆ. 2025-26ನೇ ಸಾಲಿನಲ್ಲಿ 300 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹ ಆಗಿದೆ. 300 ಕೋಟಿ ರೂ.ಯಲ್ಲಿ ಸರ್ಕಾರ 125 ಕೋಟಿ ರೂ.ಯನ್ನ ದೈನಂದಿನ ಆಡಳಿತಾತ್ಮಕ ಮತ್ತು ಇತರೆ ವೆಚ್ಚಗಳಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಬ್ಯಾಂಕ್ ಅಕೌಂಟ್‌ಗೆ ಅನುದಾನವನ್ನ ವರ್ಗಾಯಿಸಿದೆ.