– 3 ಸಾವು, ಒಟ್ಟು ಸೋಂಕಿತರ ಸಂಖ್ಯೆ 6,041ಕ್ಕೆ ಏರಿಕೆ
– ಬೆಂಗಳೂರಿನಲ್ಲಿ 42 ಮಂದಿಗೆ ಸೋಂಕು, ಉಡುಪಿಯಲ್ಲಿ 93 ಜನ ಡಿಸ್ಚಾರ್ಜ್
ಬೆಂಗಳೂರು: ಕರ್ನಾಟಕದಲ್ಲಿ ಇಂದು 120 ಮಂದಿಗೆ ಸೋಂಕು ಬಂದಿದ್ದು, 257 ಮಂದಿ ಡಿಸ್ಚಾರ್ಜ್ ಆಗಿ 3 ಮಂದಿ ಸಾವನ್ನಪ್ಪಿದ್ದಾರೆ.

ಇಂದು ಬೆಂಗಳೂರು ನಗರದಲ್ಲಿ ಅತಿ ಹೆಚ್ಚು 42 ಪಾಸಿಟಿವ್ ಬಂದಿದ್ದರೆ, ಯಾದಗಿರಿಯಲ್ಲಿ 27, ವಿಜಯಪುರ 13, ಕಲಬರುಗಿ 11 ಮಂದಿಗೆ ಸೋಂಕು ಬಂದಿದೆ. ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 6,041ಕ್ಕೆ ಏರಿಕೆಯಾಗಿದ್ದು, ಒಟ್ಟು 2,862 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಈಗ 3,108 ಸಕ್ರಿಯ ಪ್ರಕರಣಗಳಿವೆ.
ಇಂದಿನ 120 ಸೋಂಕಿತರ ಪೈಕಿ 68 ಹೊರ ರಾಜ್ಯದದಿಂದ ಆಗಮಿಸಿದ್ದರೆ, 3 ಮಂದಿ ಅಂತರಾಷ್ಟ್ರೀಯ ಪ್ರಯಾಣಿಕರಾಗಿದ್ದಾರೆ. ಕರ್ನಾಟಕದಲ್ಲಿ ಒಟ್ಟು 69 ಮಂದಿ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದಿಂದ ಮರಳಿದ 58 ವರ್ಷದ ವ್ಯಕ್ತಿ ಮೇ 23 ರಂದು ಹುಬ್ಬಳ್ಳಿ -ಧಾರವಾಡ ಆಸ್ಪತ್ರೆಗೆ ದಾಖಲಾಗಿದ್ದರು. ಜೂನ್ 9 ರಂದು ಮೃತಪಟ್ಟಿದ್ದಾರೆ.

32 ವರ್ಷದ ಬೆಂಗಳೂರಿನ ವ್ಯಕ್ತಿ ಜೂನ್ 10 ರಂದು ಮೃತಪಟ್ಟಿದ್ದು, ನಂತರ ಕೋವಿಡ್ ಪರೀಕ್ಷೆಯಲ್ಲಿ ಫಲಿತಾಂಶ ಪಾಸಿಟಿವ್ ಬಂದಿದೆ. ಜ್ವರ, ಕೆಮ್ಮುವಿನಿಂದ ಬಳಲುತ್ತಿದ್ದ 57 ವರ್ಷದ ಬೆಂಗಳೂರಿನ ವ್ಯಕ್ತಿ ಜೂನ್ 8 ರಂದು ಆಸ್ಪತ್ರೆಗೆ ದಾಖಲಾಗಿದ್ದು ಅಂದೇ ನಿಧನರಾಗಿದ್ದಾರೆ.
ಎಲ್ಲಿ ಎಷ್ಟು ಮಂದಿ ಡಿಸ್ಚಾರ್ಜ್?
ಉಡುಪಿ 93, ಕಲಬುರಗಿ 66, ಬೀದರ್ 19, ಯಾದಗಿರಿ 17, ಮಂಡ್ಯ 11, ಉತ್ತರ ಕನ್ನಡ 10, ದಕ್ಷಿಣ ಕನ್ನಡ 10, ದಾವಣಗೆರೆ 8, ಕೋಲಾರ 8, ಧಾರವಾಡ 6, ಬೆಳಗಾವಿ 4, ಹಾವೇರಿ 3, ಬಾಗಲಕೋಟೆ ಮತ್ತು ಗದಗ ಜಿಲ್ಲೆಯಲ್ಲಿ ಒಬ್ಬರು ಬಿಡುಗಡೆಯಾಗಿದ್ದಾರೆ.

ಎಲ್ಲಿ ಎಷ್ಟು ಮಂದಿಗೆ ಸೋಂಕು?
ಬೆಂಗಳೂರು ನಗರ 42, ಯಾದಗಿರಿ 27, ವಿಜಯಪುರ 13, ಕಲಬುರಗಿ 11, ಬೀದರ್ 5, ದಕ್ಷಿಣ ಕನ್ನಡ 4, ಧಾರವಾಡ 4, ದಾವಣಗೆರೆ 3, ಹಾಸನ 3, ಬಳ್ಳಾರಿ 3, ಬಾಗಲಕೋಟೆ 2, ರಾಮನಗರ 2, ಬೆಳಗಾವಿ 1.
ಐಸಿಯುನಲ್ಲಿ ಎಷ್ಟು ಮಂದಿ?
ಬೆಂಗಳೂರು ನಗರ 4, ಕಲಬುರಗಿ 4, ಬೀದರ್ 2, ಮಂಡ್ಯ, ದಕ್ಷಿಣ ಕನ್ನಡ, ಚಾಮರಾಜನಗರ, ಧಾರವಾಡದಲ್ಲಿ ತಲಾ ಒಬ್ಬರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Leave a Reply