ಸಾರ್ವಜನಿಕ ಶೌಚಾಲಯದಲ್ಲಿ 12ರ ಹುಡುಗಿ ಮೇಲೆ ಅತ್ಯಾಚಾರ

CRIME (1)

ಮುಂಬೈ: ಪುಣೆಯ ರೈಲ್ವೇ ನಿಲ್ದಾಣದ ಬಳಿಯಿರುವ ಬಂಡ್ ಗಾರ್ಡನ್ ಪ್ರದೇಶದ ಸಾರ್ವಜನಿಕ ಶೌಚಾಲಯದಲ್ಲಿ 12 ವರ್ಷದ ಹುಡುಗಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಬೆಳಕಿಗೆ ಬಂದಿದೆ.

ಇತ್ತೀಗಷ್ಟೇ ಪಶ್ಚಿಮಬಂಗಾಳದ ಪ್ರತಾಪ್‌ಘಡ್ ರೈಲ್ವೆ ನಿಲ್ದಾಣದ ಪಾರ್ಕಿಂಗ್ ಸ್ಟ್ಯಾಂಡ್ ಬಳಿಯಿದ್ದ ಸಾರ್ವಜನಿಕ ಶೌಚಾಲಯದಲ್ಲಿ 20 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ನಡೆದಿತ್ತು. ಇದೀಗ ಮಹಾರಾಷ್ಟ್ರದಲ್ಲೂ ಅಂತಹದ್ದೇ ಪ್ರಕರಣ ಕಂಡುಬಂದಿದೆ. ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆಯ ತಾಯಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಅಪ್ರಾಪ್ತನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ HIV ಸೋಂಕಿತ ಅತ್ತೆ 

crime

ಏನಿದು ಘಟನೆ?
ಸಂತ್ರಸ್ತೆಯು ಬಂಡ್ ಗಾರ್ಡನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದಾರೆ. ಘಟನೆ ನಡೆಯುವ ವೇಳೆ ಆರೋಪಿಗಳು ಆಕೆಯನ್ನು ಹಿಂಬಾಲಿಸಿಕೊಂಡು ಹೋಗಿದ್ದಾನೆ. ನಂತರ ಸಾರ್ವಜನಿಕ ಶೌಚಾಲಯದಲ್ಲಿ ಕೆಳಗೆ ಬೀಳಿಸಿ, ದೈಹಿಕ ಹಿಂಸೆ ನೀಡಿ ಪರಾರಿಯಾಗಿದ್ದಾರೆ. ಆರೋಪಿಗಳು ಹೋಗುತ್ತಿದ್ದ ವೇಳೆ ಹುಡುಗಿಯ ಚಿಕ್ಕಪ್ಪ ನೋಡಿದ್ದರಿಂದಾಗಿ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

crime

ಆರೋಪಿಯು ಮಧ್ಯವಯಸ್ಸಿನವನಾಗಿದ್ದು ಈತ ಹುಡುಗಿ ಮನೆಯವರಿಗೆ ಪರಿಚಿತನಾಗಿದ್ದನು. ಪ್ರತಿನಿತ್ಯ ಅವರನ್ನು ಭೇಟಿಯಾಗುತ್ತಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: 16ರ ಹುಡುಗಿ ಮೇಲೆ ಅತ್ಯಾಚಾರ- ಕಾಂಡೋಮ್ ಬಳಸಿದ್ದಕ್ಕಾಗಿ ಜಾಮೀನು ಕೊಟ್ಟ ಹೈಕೋರ್ಟ್

ನಂತರ ಹುಡುಗಿ ವಿಷಯವನ್ನು ತಾಯಿಗೆ ತಿಳಿಸಿದ್ದಾರೆ. ಸಂತ್ರಸ್ತೆ ತಾಯಿ ದೂರು ನೀಡಲಾಗಿ ಆರೋಪಿ ವಿರುದ್ಧ ಮಕ್ಕಳ ಲೈಂಗಿಕ ಅಪರಾಧಗಳ (ಪೋಕ್ಸೊ) ತಡೆ ಕಾಯ್ದೆ-2012ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ ಆರೋಪಿ ಪತ್ತೆಗೆ ತಂಡವನ್ನು ರಚಿಸಲಾಗಿದೆ ಎಂದು ಬಂಡ್ ಗಾರ್ಡನ್ ಪೊಲೀಸ್ ಠಾಣೆ ಪ್ರಭಾರಿ ಇನ್ಸ್‌ಪೆಕ್ಟರ್‌ ಅಶ್ವಿನಿ ಸತ್ಪುಟೆ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *