12 ವರ್ಷದ ಮಗಳ ಮೇಲೆ ತಂದೆಯಿಂದಲೇ 5 ವರ್ಷ ನಿರಂತರ ರೇಪ್, ಕೃತ್ಯಕ್ಕೆ ತಾಯಿ ಸಾಥ್!

ಭೋಪಾಲ್: 12 ವರ್ಷದ ಬಾಲಕಿಯ ಮೇಲೆ ಸತತ 5 ವರ್ಷಗಳ ಕಾಲ ತಂದೆಯೇ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಮಧ್ಯಪ್ರದೇಶದ ಛತ್ತರ್ಪುರ್ ನಗರದಲ್ಲಿ ನಡೆದಿದೆ.

ಘಟನೆಯಲ್ಲಿ ತನ್ನ ಪತಿ ಮಗಳ ಮೇಲೆ ಅತ್ಯಾಚಾರ ನಡೆಸುತ್ತಿರುವ ಕುರಿತು ತಾಯಿಗೆ ಗೊತ್ತಿದ್ದರೂ ಆಕೆ ಹೀನಕೃತ್ಯಕ್ಕೆ ಅಡ್ಡಿಪಡಿಸಿಲ್ಲ. ಅಲ್ಲದೇ ತಾಯಿಯೆ ತನ್ನ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಎಸಗಲು ಸಹಾಯ ಮಾಡಿದ್ದಾಳೆ.

ಕೃತ್ಯದ ಬಗ್ಗೆ ತಿಳಿದ ಬಾಲಕಿಯ ಸಹೋದರ ಒಂದು ವರ್ಷದ ಹಿಂದೆಯೇ ವಿರೋಧ ವ್ಯಕ್ತಪಡಿಸಲು ಮುಂದಾಗ ಆತನಿಗೆ ಸುಮ್ಮನಿರುವಂತೆ ತಂದೆ ಧಮ್ಕಿ ಹಾಕಿ ಸುಮ್ಮನಿರುವಂತೆ ಹೇಳಿದ್ದ. ಆದರೆ ಬಾಲಕಿ ಮನೆಯಿಂದ ತಪ್ಪಿಸಿಕೊಂಡು ಬಂದ ಸಂದರ್ಭದಲ್ಲಿ ತಂದೆಯ ಕೃತ್ಯದ ಕುರಿತು ತನ್ನ ಸಂಬಂಧಿಯೊಬ್ಬರ ಬಳಿ ಹೇಳಿಕೊಂಡಿದ್ದಾಳೆ. ಈ ವಿಚಾರ ತಿಳಿದು ಸಂಬಂಧಿಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದು, ಘಟನೆ ಬೆಳಕಿಗೆ ಬಂದಿದೆ.

ಬಾಲಕಿಯ ಹೇಳಿಕೆ ಪಡೆದ ಪೊಲೀಸರು ತಂದೆ ಹಾಗೂ ತಾಯಿ ಇಬ್ಬರನ್ನು ಬಂಧಿಸಿದ್ದು, ತನಿಖೆ ಕೈಗೊಂಡಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಸಂತ್ರಸ್ತೆ ತನ್ನ ತಂದೆ ಹಾಗೂ ತಾಯಿ ಇಬ್ಬರಿಗೂ ಮರಣ ದಂಡನೆ ವಿಧಿಸುವಂತೆ ಕೇಳಿಕೊಂಡಿದ್ದಾಳೆ.

 

Comments

Leave a Reply

Your email address will not be published. Required fields are marked *