ಎಕ್ಸ್‌ಪ್ರೆಸ್‌ವೇನಲ್ಲಿ ಚಲಿಸುತ್ತಿದ್ದಾಗ ಬ್ರೇಕ್ ಫೇಲ್ – ಟ್ರಕ್ ಹೊಡೆತಕ್ಕೆ 12 ಕಾರುಗಳು ನಜ್ಜುಗುಜ್ಜು

ಮುಂಬೈ: ಟ್ರಕ್ (Truck) ಒಂದರ ಬ್ರೇಕ್ ಫೇಲ್ (Brake Fail) ಆದ ಪರಿಣಾಮ ಇತರ ವಾಹನಗಳಿಗೆ ಡಿಕ್ಕಿ ಹೊಡೆದು 12 ಕಾರುಗಳು (Cars) ನಜ್ಜುಗುಜ್ಜಾಗಿರುವ ಘಟನೆ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇನಲ್ಲಿ (Mumbai-Pune Expressway) ಗುರುವಾರ ನಡೆದಿದೆ. ಘಟನೆಯಲ್ಲಿ ನಾಲ್ವರಿಗೆ ಗಾಯಗಳಾಗಿದ್ದು ಸದ್ಯ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ವರದಿಗಳು ತಿಳಿಸಿವೆ.

ಮಹಾರಾಷ್ಟ್ರದ (Maharashtra) ಖೋಪೋಲಿ ಬಳಿ ಅಪಘಾತ ನಡೆದಿದೆ. ಎಕ್ಸ್‌ಪ್ರೆಸ್‌ವೇನಲ್ಲಿ ಚಳಿಸುತ್ತಿದ್ದ ಸಂದರ್ಭ ಟ್ರಕ್‌ನ ಬ್ರೇಕ್ ಫೇಲ್ ಆಗಿದೆ. ಪರಿಣಾಮ ಟ್ರಕ್ 12 ಕಾರುಗಳಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಸುಮಾರು 7-8 ಕಾರುಗಳು ಒಂದಕ್ಕೊಂದು ಡಿಕ್ಕಿ ಹೊಡೆದಿವೆ ಎನ್ನಲಾಗಿದೆ. ಇದನ್ನೂ ಓದಿ: ದಾಂತೇವಾಡ ನಕ್ಸಲ್ ದಾಳಿ- ಮೃತ ಯೋಧನ ಶವಕ್ಕೆ ಹೆಗಲು ಕೊಟ್ಟ ಭೂಪೇಶ್ ಬಘೇಲ್

ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೋಗಳು ಹರಿದಾಡಿವೆ. ಹತ್ತರು ಕಾರುಗಳು ನಜ್ಜುಗುಜ್ಜಾಗಿ ರಸ್ತೆಯಲ್ಲಿ ರಾಶಿ ಬಿದ್ದಿರುವುದು ಕಂಡುಬಂದಿದೆ. ಟ್ರಕ್‌ಗೆ ಡಿಕ್ಕಿ ಹೊಡೆದ ಸ್ಥಿತಿಯಲ್ಲಿ ಇನ್ನೆರಡು ಕಾರುಗಳು ಒಂದರ ಮೇಲೊಂದರಂತೆ ಬಿದ್ದಿರುವುದೂ ಕಂಡುಬಂದಿದೆ. ಗಾಯಾಳುಗಳನ್ನು ಚಿಕಿತ್ಸೆಗೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮೋದಿ ವಿಷದ ಹಾವು ಇದ್ದಂತೆ: ಖರ್ಗೆ