12ರ ಬಾಲಕಿಯ ಅತ್ಯಾಚಾರ ಕೇಸ್- ಪ್ರಮುಖ ಆರೋಪಿಯ ಬಂಧನ

ನವದೆಹಲಿ: 12 ಬಾಲಕಿಯನ್ನು ಅತ್ಯಾಚಾರಗೈದು ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಂತ್ರಸ್ತೆಯನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಬಾಲಕಿ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾಳೆ.

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಏಮ್ಸ್ ಆಸ್ಪತ್ರೆಗೆ ತೆರಳಿ ಬಾಲಕಿಯ ಆರೋಗ್ಯ ವಿಚಾರಿಸಿ ವೈದ್ಯರೊಂದಿಗೆ ಚರ್ಚೆ ನಡೆಸಿದರು. ಆಸ್ಪತ್ರೆಯ ಮುಂಭಾಗ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ, ಮುಂದಿನ 48 ಗಂಟೆ ಬಾಲಕಿಯ ಆರೋಗ್ಯ ವಿಚಾರದಲ್ಲಿ ನಿರ್ಣಾಯಕ ಘಟ್ಟವಾಗಲಿದೆ. ವೈದ್ಯರು ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ. ಬಾಲಕಿಯ ಕುಟುಂಬಕ್ಕೆ ಸರ್ಕಾರದಿಂದ 10 ಲಕ್ಷ ರೂ. ನೀಡಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ಹಾಡಹಗಲೇ ಮನೆಗೆ ನುಗ್ಗಿ 12ರ ಬಾಲೆಯ ರೇಪ್- ಕತ್ತರಿಯಿಂದ ಮಾರಣಾಂತಿಕ ಹಲ್ಲೆ

ಏನಿದು ಘಟನೆ? ಬಾಲಕಿಯ ಮನೆಯಲ್ಲಿ ಒಬ್ಬಳೇ ಇರೋದನ್ನು ಖಾತ್ರಿ ಮಾಡಿಕೊಂಡು ನುಗ್ಗಿದ ದುಷ್ಕರ್ಮಿಗಳು ಅತ್ಯಾಚಾರ ಎಸಗಿ, ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಗಾಯಗೊಂಡು ಬಾಲಕಿ ಮನೆಯಿಂದ ಹೊರ ಬರೋದನ್ನ ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಾಲಕಿಯ ತಂದೆ, ತಾಯಿ ಮತ್ತು ಸೋದರಿ ಮನೆಯ ಬಳಿಕ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಎಲ್ಲರೂ ಒಂದೇ ಕೋಣೆಯಲ್ಲಿ ವಾಸವಾಗಿದ್ದರು.

Comments

Leave a Reply

Your email address will not be published. Required fields are marked *