ಸಂಕ್ರಾಂತಿಗೆ ಇಂಗ್ಲೆಂಡಿನಿಂದ ತಾಯ್ನಾಡಿಗೆ ಮರಳಿ ಬಂತು 10ನೇ ಶತಮಾನದ ಯೋಗಿನಿ ವಿಗ್ರಹ

ನವದೆಹಲಿ: ಉತ್ತರ ಪ್ರದೇಶದ ಹಳ್ಳಿಯೊಂದರಿಂದ ಇಂಗ್ಲೆಂಡ್‍ಗೆ ಹೊತ್ತೊಯ್ಯಲಾದ 10ನೇ ಶತಮಾನದ ವಿಗ್ರಹ ಈ ವರ್ಷದ ಸಂಕ್ರಾಂತಿಯಲ್ಲಿ ತಾಯ್ನಾಡಿಗೆ ಮರಳಿ ಬಂದಿದೆ.

ವಿಗ್ರಹವನ್ನು 40 ವರ್ಷಗಳ ಹಿಂದೆ ಭಾರತದಿಂದ ಇಂಗ್ಲೆಂಡ್‍ಗೆ ಕದ್ದೊಯ್ಯಲಾಗಿತ್ತು. ಇಂಗ್ಲೆಂಡ್‍ನ ಖಾಸಗಿ ನಿವಾಸದ ಉದ್ಯಾನದಲ್ಲಿ 10ನೇ ಶತಮಾನದ ಪ್ರಾಚೀನ ವಿಗ್ರಹವನ್ನು ಇತ್ತೀಚೆಗೆ ಪತ್ತೆ ಮಾಡಲಾಗಿತ್ತು. ಈ ವಿಗ್ರಹವನ್ನು ಶುಕ್ರವಾರ ಭಾರತಕ್ಕೆ ತಂದು ಮರು ಸ್ಥಾಪಿಸಲಾಗಿದೆ. ಇದನ್ನೂ ಓದಿ: ರಿಯಲ್ ಸ್ಟಾರ್  ಉಪ್ಪಿ ಮನೆಯಲ್ಲಿ ಸಂಕ್ರಾತಿ ಸಡಗರ

ವಿಗ್ರಹವನ್ನು ಸ್ವದೇಶಕ್ಕೆ ತರುವ ಜಾವಾಬ್ದಾರಿಯನ್ನು ಭಾರತೀಯ ಹೈ ಕಮಿಷನರ್ ಗಾಯತ್ರಿ ಇಸ್ಸಾರ್ ಕುಮಾರ್ ವಹಿಸಿಕೊಂಡಿದ್ದು, ಇವರಿಗೆ ಆರ್ಟ್ ರಿಕವರಿ ಇಂಟರ್‍ನ್ಯಾಶನಲ್ ಕ್ರಿಸ್ ಮರಿನೆಲ್ಲೋ ಸಹಾಯ ಮಾಡಿದ್ದಾರೆ.

ಮರಳುಗಲ್ಲಿನಲ್ಲಿ ಸುಂದರವಾಗಿ ಕೆತ್ತಲಾಗಿರುವ ಮೇಕೆ ತಲೆಯ ಯೋಗಿನಿ ವಿಗ್ರಹ ಉತ್ತರ ಪ್ರದೇಶದ ಬಂದಾ ಜಿಲ್ಲೆ ಲೋಖಾರಿ ದೇವಸ್ಥಾನದ್ದಾಗಿತ್ತು. ಇದೀಗ ವಿಗ್ರಹವನ್ನು ನವದೆಹಲಿಯ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ರವಾನಿಸಲಾಗುತ್ತಿದೆ. ಇದನ್ನೂ ಓದಿ: ಇನ್ಫಿ ನಾರಾಯಣ ಮೂರ್ತಿ ಅಳಿಯ ಮುಂದಿನ ಬ್ರಿಟನ್ ಪ್ರಧಾನಿ?

ಮೇಕೆ ತಲೆಯ ಯೋಗಿನಿ ವಿಗ್ರಹ 1980ರಲ್ಲಿ ಲೋಖಾರಿ ದೇವಸ್ಥಾನದಿಂದ ನಾಪತ್ತೆಯಾಗಿತ್ತು. ನಂತರ 1988ರಲ್ಲಿ ಇಂಗ್ಲೆಂಡ್‍ನ ಕಲಾ ಮಾರುಕಟ್ಟೆಯಲ್ಲಿ ಪತ್ತೆಯಾಗಿತ್ತು.

Comments

Leave a Reply

Your email address will not be published. Required fields are marked *