103 ವರ್ಷಗಳಷ್ಟು ಹಳೆಯ ಎಸ್‍ಬಿಎಂ ಇನ್ನು ನೆನಪು ಮಾತ್ರ!

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಬ್ಯಾಂಕಿಗೆ ಇನ್ಮುಂದೆ ಎಸ್‍ಬಿಎಂ ಬ್ಯಾಂಕ್ ಎಂಬ ಹೆಸರು ಮರೆಯಾಗಲಿದ್ದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಂದು ಬದಲಾಗಲಿದೆ. 103 ವರ್ಷಗಳ ಹಳೆಯ ಎಸ್‍ಬಿಎಂ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜೊತೆ ವಿಲೀನವಾಗಿದೆ.

ಎಸ್‍ಬಿಎಂನ ಎಲ್ಲಾ ವ್ಯವಹಾರಗಳು ಇವತ್ತು ಮಧ್ಯರಾತ್ರಿಗೆ ಕೊನೆಯಾಗಲಿದ್ದು ನಾಳೆಯಿಂದ ಎಸ್‍ಬಿಐ ಬ್ಯಾಂಕ್ ಆಗಿ ಕೆಲಸ ನಿರ್ವಹಿಸಲಿದೆ. ಈಗಾಗ್ಲೇ ಬ್ಯಾಂಕ್‍ಗಳ ಮುಂದಿರುವ ಬೋರ್ಡ್‍ಗಳನ್ನೂ ಬದಲಾಯಿಸಲಾಗಿದೆ.

1903ರ ಅಕ್ಟೋಬರ್ 2ರಂದು ಮೈಸೂರು ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್ ಎಂ ವಿಶ್ವೇಶ್ವರಯ್ಯನವರು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಅಸ್ತಿತ್ವಕ್ಕೆ ತಂದಿದ್ರು.

ವಿಲೀನ ಯಾಕೆ?: ವಿಶ್ವದ ಟಾಪ್ 50 ಪಟ್ಟಿಯಲ್ಲಿ ಭಾರತದ ಯಾವೊಂದು ಬ್ಯಾಂಕ್ ಸ್ಥಾನ ಪಡೆದಿಲ್ಲ. ಈ ಪಟ್ಟಿಯಲ್ಲಿ ಸ್ಥಾನ ಪಡೆಯಲು ಎಸ್‍ಬಿಐ ಮುಂದಾಗುತ್ತಿದ್ದು, ಕೇಂದ್ರದ ಒಪ್ಪಿಗೆಯ ಹಿನ್ನೆಲೆಯಲ್ಲಿ ಬ್ಯಾಂಕ್‍ಗಳ ವಿಲೀನ ಪ್ರಕ್ರಿಯೆ ನಡೆಯುತ್ತಿದೆ. ಎಸ್‍ಬಿಎಂ, ಜೊತೆಗೆ ಸ್ಟೇಟ್ ಬ್ಯಾಂಕ್ ಆಫ್ ಬಿಕಾನೇರ್ ಹಾಗೂ ಜೈಪುರ್ (ಎಸ್ಬಿಬಿಜೆ), ಸ್ಟೇಟ್ ಬ್ಯಾಂಕ್ ಆಫ್ ಟ್ರಾವಂಕೂರ್(ಎಸ್ಬಿಟಿ), ಸ್ಟೇಟ್ ಬ್ಯಾಂಕ್ ಪಟಿಯಾಲಾ (ಎಸ್ಬಿಪಿ), ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ (ಎಸ್ಬಿಎಚ್) ಹಾಗೂ ಭಾರತೀಯ ಮಹಿಳಾ ಬ್ಯಾಂಕ್ (ಬಿಬಿಎಂ)ಗಳು ಎಸ್‍ಬಿಐ ಜೊತೆ ವಿಲೀನವಾಗುತ್ತಿದೆ.

Comments

Leave a Reply

Your email address will not be published. Required fields are marked *