100ನೇ ಪಂದ್ಯದಲ್ಲೇ ಜೋ ರೂಟ್ ಶತಕ – ಮೊದಲ ದಿನದ ಗೌರವ ಪಡೆದ ಇಂಗ್ಲೆಂಡ್

ಚೆನ್ನೈ: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಶತಕ ಗಳಿಸುವ ಮೂಲಕ ಇಂಗ್ಲೆಂಡ್ ತಂಡದ ನಾಯಕ ತಮ್ಮ ನೂರನೇ ಪಂದ್ಯವನ್ನು ಸ್ಮರಣೀಯವಾಸುವುದರ ಮೂಲಕ ಮೊದಲ ದಿನದ ಗೌರವವನ್ನು ತಮ್ಮ ತಂಡಕ್ಕೆ ಒದಗಿಸಿದ್ದಾರೆ.

100 ನೇ ಪಂದ್ಯ ಆಡುತ್ತಿರುವ ಜೋ ರೂಟ್ 128 ರನ್ (197 ಎಸೆತ, 14 ಬೌಂಡರಿ, 1 ಸಿಕ್ಸರ್) ಸಿಡಿಸಿ ಇಂಗ್ಲೆಂಡ್ ತಂಡಕ್ಕೆ ಆಸರೆಯಾದರೂ. ಈ ಶತಕದೊಂದಿಗೆ ಜೋ ರೂಟ್ ನಾಯಕನಾಗಿ 100ನೇ ಪಂದ್ಯದಲ್ಲಿ ಶತಕ ಸಿಡಿಸಿದ 5 ನೇ ಆಟಗಾರರಾಗಿ ಕಾಣಿಸಿಕೊಂಡರು. ಈ ಮೊದಲು ಕಾಲಿನ್ ಕೌಡ್ರೆ, ಇಂಜಮಾಮ್ ಉಲ್ ಹಕ್, ರಿಕಿ ಪಾಟಿಂಗ್ ಮತ್ತು ಗ್ರೇಮ್ ಸ್ಮಿತ್ ತಮ್ಮ ತಮ್ಮ 100ನೇ ಪಂದ್ಯದಲ್ಲಿ ಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದರು.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದರು. ಇಂಗ್ಲೆಂಡ್ ಆರಂಭಿಕ ಆಟಗಾರರಾದ ರೋರಿ ಬನ್ರ್ಸ್ ಮತ್ತು ಡೊಮ್ ಸಿಬ್ಲಿ ಜೋಡಿ ಮೊದಲ ವಿಕೆಟ್‍ಗೆ 23.5 ಓವರ್‍ಗಳಲ್ಲಿ 63 ರನ್‍ಗಳ ಕೊಡುಗೆ ನೀಡಿತು. ಉತ್ತಮ ಆಟವಾಡುತ್ತಿದ್ದ ರೋರಿ ಬನ್ರ್ಸ್ 33ರನ್ (60 ಎಸೆತ, 4 ಬೌಂಡರಿ) ಸಿಡಿಸಿ ಔಟ್ ಆದ ನಂತರ 3ನೇ ವಿಕೆಟ್‍ಗೆ ಒಂದಾದ ನಾಯಕ ಜೋ ರೂಟ್ ಮತ್ತು ಡೊಮ್ ಸಿಬ್ಲಿ 3ನೇ ವಿಕೆಟ್‍ಗೆ 338 ಎಸೆತಗಳಲ್ಲಿ 200ರನ್‍ಗಳ ಜೊತೆಯಾಟವಾಡಿದರು. ಮೊದಲ ದಿನ ಅಂತ್ಯಕ್ಕೆ ಇಂಗ್ಲೆಂಡ್ 263 ರನ್‍ಗಳಿಸಿ ಮೂರು ವಿಕೆಟ್ ಕಳೆದುಕೊಂಡಿದೆ. 128ರನ್ (197 ಎಸೆತ, 14 ಬೌಂಡರಿ, 1 ಸಿಕ್ಸರ್) ಸಿಡಿಸಿರುವ ಜೋ ರೂಟ್ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಭಾರತದ ಸರದಿಯಲ್ಲಿ ಪ್ರಮುಖ ಬೌಲರ್‍ ಗಳಾದ ಜಸ್ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ, ರವಿಚಂದ್ರನ್ ಅಶ್ವಿನ್ ಗಾಯದಿಂದ ಚೇತರಿಸಿಕೊಂಡು ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡರು. ಭಾರತದ ಪರ ಜಸ್ಪ್ರೀತ್ ಬುಮ್ರಾ 28.3 ಬೌಲ್ ಮಾಡಿ 2 ವಿಕೆಟ್ ಕಿತ್ತರೆ ಆಶ್ವಿನ್ 24 ಓವರ್ ಎಸೆದು 1 ವಿಕೆಟ್ ಪಡೆದರು.

Comments

Leave a Reply

Your email address will not be published. Required fields are marked *