ಸಾಲು ಮರದ ತಿಮ್ಮಕ್ಕ ಜೀವನ ನಿರ್ವಹಣೆಗೆ ಸಿಎಂರಿಂದ 10 ಲಕ್ಷ ರೂ. ಸಹಾಯ

-1 ಕೋಟಿ ರೂ.ಗೆ ಡಿಮ್ಯಾಂಡ್ ಮಾಡಿದ ಸಾಕು ಪುತ್ರ

ಬೆಂಗಳೂರು: ಗಿಡ ಮರಗಳಿಗೆ ನೀರುಣಿಸಿ ಬೆಳಸಿದ ವೃಕ್ಷ ಮಾತೆಗೆ ಜೀವನ ನಿರ್ವಹಣೆಗೆ ಅಭದ್ರತೆ ಕಾಡದಿರಲಿ ಎಂದು ಸಿಎಂ ಸಿದ್ದರಾಮಯ್ಯ 10 ಲಕ್ಷ ರೂ. ಹಣವನ್ನ ತಮ್ಮ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೀಡಲು ಮುಂದಾಗಿದ್ದಾರೆ. ಆದರೆ ಸಾಕು ಮಗ ಮಾತ್ರ ಕೊಟ್ಟರೆ ಒಂದು ಕೋಟಿ. ರೂ. ನೀಡಿ ಎಂದು ಬೇಡಿಕೆ ಇಟ್ಟಿದ್ದಾರೆ.

ಪಾಂಡವಪುರದ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕರಿಗೆ ಜೀವನ ಭದ್ರತೆ ಒದಗಿಸಿಕೊಡುವಂತೆ ಸಿಎಂ ಸಿದ್ದರಾಮಯ್ಯರಿಗೆ ಪತ್ರ ಬರೆದಿದ್ದರು. ಈ ಸಂಬಂಧ ಸಿಎಂ ಸೂಚನೆ ಮೇರೆಗೆ ಸಿಎಂ ಪರಿಹಾರ ನಿಧಿಯ ಅಧಿಕಾರಿಗಳು 10 ಲಕ್ಷ ರೂ.ಯ ಚೆಕ್ ರೆಡಿ ಮಾಡಿಕೊಂಡು ಸಾಲು ಮರದ ತಿಮ್ಮಕ್ಕರಿಗೆ ಪತ್ರ ಬರೆದಿದ್ದಾರೆ. ಚೆಕ್ ಬಿಡುಗಡೆಗೆ ಅಗತ್ಯ ದಾಖಲೆಗಳನ್ನು ನೀಡಿ ಚೆಕ್ ಪಡೆಯಿರಿ ಎಂದು ಪತ್ರವನ್ನು ಬರೆದಿದ್ದಾರೆ.

ತಿಮ್ಮಕ್ಕರ ಸಾಕು ಮಗ ಉಮೇಶ್ ಮಾತ್ರ 10 ಲಕ್ಷದಲ್ಲಿ ಜೀವನ ಭದ್ರತೆ ಸಿಗಲ್ಲ. ಕೊಟ್ಟರೆ ಒಂದು ಕೋಟಿ ಹಣ ನೀಡಿ ಎಂದು ಡಿಮ್ಯಾಂಡ್ ಮಾಡುತ್ತಿದ್ದಾರೆ ಎಂದು ಸಿಎಂ ಕಚೇರಿಯ ಅಧಿಕಾರಿಗಳು ಹೇಳುತ್ತಿದ್ದಾರೆ. ಕಳೆದ 2 ತಿಂಗಳಿನಿಂದ ಪತ್ರ ಬರೆದು ಸಿಎಂ ಕಚೇರಿ ಅಧಿಕಾರಿಗಳು ಸುಸ್ತಾಗಿದ್ದಾರೆ. ಆದರೆ ಸಾಲುಮರದ ತಿಮ್ಮಕ್ಕರ ದತ್ತು ಪುತ್ರ ಉಮೇಶ್ ಬೇರೆಯದೆ ಕತೆ ಹೇಳುತ್ತಿದ್ದಾರೆ.

ಸರ್ಕಾರ ಈ ಹಿಂದೆ ಒಂದು ಕೋಟಿ ಹಣ ನೀಡುತ್ತೇವೆ. ಅಲ್ಲದೆ 10 ಎಕರೆ ಭೂಮಿಯನ್ನು ನೀಡುತ್ತೇವೆ ಎಂದಿತ್ತು. ಆದರೆ ಇದೂವರೆಗೆ ಅದು ಈಡೇರಿಲ್ಲ. ಆದ್ದರಿಂದ 10 ಲಕ್ಷ ಹಣವನ್ನು ಸ್ವೀಕರಿಸಿಲ್ಲ ಎಂದು ಪರೋಕ್ಷವಾಗಿ ಹೇಳುತ್ತಿದ್ದಾರೆ. ಇನ್ನೊಂದೆಡೆ ಎಲ್ಲವು ತಿಮ್ಮಕ್ಕನ ತೀರ್ಮಾನಕ್ಕೆ ಬಿಡುತ್ತೇನೆ ಎನ್ನುತ್ತಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ಮಾತ್ರ ಶಾಸಕ ಪುಟ್ಟಣ್ಣಯ್ಯ ಅವರ ಮನವಿಗೆ ಪುರಸ್ಕರಿಸಿ ತಮ್ಮ ಪರಿಹಾರ ನಿಧಿಯಿಂದ 10 ಲಕ್ಷ ದ ದೊಡ್ಡ ಮಟ್ಟದ ಹಣವನ್ನೆ ನೀಡಲು ಮುಂದಾಗಿದ್ದಾರೆ.

ತಿಮ್ಮಕ್ಕ ಸಾಕು ಮಗನ ಸ್ಪಷ್ಟನೆ: ಸರ್ಕಾರವೇ ಈ ಹಿಂದೆ ಜೀವನ ನಿರ್ವಹಣೆಗೆ 1 ಕೋಟಿ ರೂ. 10 ಎಕರೆ ಜಮೀನು ನೀಡುವುದಾಗಿ ಘೋಷಿಸಿತ್ತು. ಆದರೆ ಅದನ್ನು ಈಡೇರಿಸಲಿಲ್ಲ. ಇದನ್ನು ಸರ್ಕಾರಕ್ಕೆ ಜ್ಞಾಪಿಸುವ ಶಿಫಾರಸು ಪತ್ರವನ್ನು ಶಾಸಕ ಕೆಎಸ್ ಪುಟ್ಟಣ್ಣಯ್ಯ ಸಿಎಂಗೆ ನೀಡಿದ್ದರು. ಅದರಂತೆ ಸಿಎಂ ತಿಮ್ಮಕ್ಕ ಅವರಿಗೆ ವೈದ್ಯಕೀಯ ಪರಿಹಾರವಾಗಿ 10 ಲಕ್ಷ ರೂ. ನೀಡಲು ತೀರ್ಮಾನಿಸಿರುವುದಾಗಿ ನಮಗೆ ಪತ್ರ ಬಂದಿತ್ತು. ಆದರೆ ಸರ್ಕಾರಿಂದ ವೈದ್ಯಕೀಯ ಪರಿಹಾರ ಪಡೆಯವುದು ಬೇಡ ಎನ್ನುವ ತಿಮ್ಮಕ್ಕ ಅವರ ತೀರ್ಮಾನದಂತೆ ಆ ಪರಿಹಾರವನ್ನು ಪಡೆದಿಲ್ಲ ಹೊರತಾಗಿ ನಾನು ಆಗಲಿ ತಿಮ್ಮಕ್ಕ ಆಗಲಿ ಸರ್ಕಾರ 1 ಕೋಟಿ ಬೇಡಿಕೆ ಇಟ್ಟಿದ್ದೇನೆ ಎನ್ನುವುದು ಶುದ್ಧ ಸುಳ್ಳು ಎಂದು ಉಮೇಶ್ ಸ್ಪಷ್ಟಪಡಿಸಿದ್ದಾರೆ.

 

Comments

Leave a Reply

Your email address will not be published. Required fields are marked *