ಜಮ್ಮು ಸುರಂಗ ಕುಸಿತ – 10 ಮೃತದೇಹಗಳು ಪತ್ತೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯಲ್ಲಿ ಗುರುವಾರ ಸುರಂಗ ಕುಸಿತವಾಗಿದ್ದು, 36 ಗಂಟೆಗಳ ಸುದೀರ್ಘ ರಕ್ಷಣಾ ಕಾರ್ಯಚರಣೆ ಬಳಿಕ ಇಲ್ಲಿಯವರೆಗೆ ಅವಶೇಷಗಳಿಂದ 10 ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶ್ರೀನಗರ-ಜಮ್ಮು ಹೆದ್ದಾರಿಯ ಖೋನಿನಲ್ಲ ಎಂಬಲ್ಲಿ ನಿರ್ಮಾಣ ಹಂತದಲ್ಲಿದ್ದ ಸುರಂಗದಲ್ಲಿ ಭಾರೀ ಭೂಕುಸಿತ ಉಂಟಾಗಿತ್ತು. ಪರಿಣಾಮ ಕಾರ್ಮಿಕರು ಅವಶೇಷಗಳಡಿ ಹೂತು ಹೋಗಿದ್ದರು. ಇದನ್ನೂ ಓದಿ: ಈಡೇರಿದ ಬೆಂಗ್ಳೂರು ಅಭಿಮಾನಿಗಳ ಬಯಕೆ – ಆರ್‌ಸಿಬಿ ಪ್ಲೇ ಆಫ್‍ಗೆ ಡೆಲ್ಲಿ ಮನೆಗೆ

ಸುರಂಗ ನಿರ್ಮಿಸುತ್ತಿದ್ದ ಕಂಪನಿ ರಕ್ಷಣಾ ಮಾನದಂಡಗಳನ್ನು ಅನುಸರಿಸದಿರುವುದೇ ದುರಂತಕ್ಕೆ ಕಾರಣವಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕಂಪನಿ ನಿರ್ಲಕ್ಷ್ಯಕ್ಕೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಇಂದು 155 ಕೇಸ್ – 166 ಮಂದಿ ಆಸ್ಪತ್ರೆಯಿಂದ ಬಿಡುಗಡೆ

ಗುರುವಾರ ತಡರಾತ್ರಿ ಸುರಂಗದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದ ಸಂದರ್ಭ ಬೃಹತ್ ಬಂಡೆಗಳು ಕುಸಿದಿದ್ದವು. ಅವಶೇಷಗಳಿಂದ ಪಶ್ಚಿಮ ಬಂಗಾಳದ ಐವರು, ನೇಪಾಳದ ಇಬ್ಬರು, ಅಸ್ಸಾಂನ ಒಬ್ಬ ಹಾಗೂ ಜಮ್ಮು ಮತ್ತು ಕಾಶ್ಮೀರದ ಇಬ್ಬರ ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *