10 ಮಂದಿ ಸಿಬ್ಬಂದಿಗೆ ಕೊರೊನಾ- ಪೊಲೀಸ್ ಠಾಣೆ ಶಾಲೆಗೆ ಶಿಫ್ಟ್

ಉಡುಪಿ: ಜಿಲ್ಲೆಯ ಕಾಪು ತಾಲೂಕು ಪಡುಬಿದ್ರಿ ಪೋಲೀಸ್ ಠಾಣೆಯ 10 ಪೊಲೀಸರಿಗೆ ಕೊರೊನಾ ಪಾಸಿಟಿವ್ ಧೃಡಪಟ್ಟಿದೆ. ಪಡುಬಿದ್ರಿ ಪೊಲೀಸ್ ಠಾಣೆ ಸರ್ಕಾರಿ ಬೋರ್ಡ್ ಶಾಲೆಗೆ ಶಿಫ್ಟ್ ಆಗಿದೆ.

ಎಸ್‍ಐ ಸಹಿತ 10 ಸಿಬ್ಬಂದಿಗೆ ಕೊರೊನಾ ಸೋಂಕು ದೃಢವಾಗಿದೆ. ಸೋಂಕಿತ ಪೊಲೀಸರು ಕ್ವಾರಂಟೈನ್‍ನಲ್ಲಿದ್ದು, 24 ಗಂಟೆಗಳ ಕಾಲ ಪಡುಬಿದ್ರಿ ಠಾಣೆ ಸೀಲ್ ಡೌನ್ ಮಾಡಲಾಗಿದೆ. ಠಾಣೆಯಲ್ಲಿ ಕೆಲವು ದಿನಗಳ ಹಿಂದೆ  ಪೊಲೀಸರೊಬ್ಬರ ಹುಟ್ಟುಹಬ್ಬ ಆಚರಣೆ ಮಾಡಲಾಗಿತ್ತು. ಬರ್ತ್ ಡೇ ಪ್ರಯುಕ್ತ ಔತಣ ಕೂಟ ಏರ್ಪಡಿಸಲಾಗಿತ್ತು.

ಸಮಾರಂಭ ನಡೆದ ವಾರದೊಳಗೆ ಸಿಬ್ಬಂದಿಯೊಬ್ಬರಿಗೆ ಜ್ವರ ಬಂದಿದೆ. ಆನಂತರ ಉಳಿದ ಸಿಬ್ಬಂದಿಗೆ ಜ್ವರ ವ್ಯಾಪಿಸಿದೆ. ಶೀತ ಜ್ವರ ಕೆಮ್ಮಿನಿಂದ ಬಳಲುತ್ತಿದ್ದ ಎಲ್ಲಾ ಪೊಲೀಸ್ ಸಿಬ್ಬಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸ್ ಠಾಣೆಯನ್ನು ಸಂಪೂರ್ಣವಾಗಿ ಸ್ಯಾನಿಟೈಸ್  ಮಾಡಲಾಗಿದೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಎಸ್ ಪಿ ವಿಷ್ಣುವರ್ಧನ್, ಕೋವಿಡ್ ವಾರಿಯರ್‌ಗಳಾಗಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗೆ ಸೋಂಕು ತಗುಲಿರುತ್ತದೆ. ಚೆಕ್ ಪೋಸ್ಟ್ ಟೋಲ್ ಗಳಲ್ಲಿ ಕೆಲಸ ಮಾಡುವಾಗ, ಕೊರೊನಾ ಲಾಕ್‍ಡೌನ್ ಸಂದರ್ಭ ಸಾರ್ವಜನಿಕ ಸ್ಥಳಗಳಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಂದರ್ಭದಲ್ಲಿ ಸೋಂಕು ತಗಲಿರಬಹುದು ಎಂದಿದ್ದಾರೆ.

Comments

Leave a Reply

Your email address will not be published. Required fields are marked *