1 ರೂ. ಪ್ಲಾನ್ ಪರಿಚಯಿಸಿದ ಜಿಯೋ

ಮುಂಬೈ: ಜಿಯೋ ತನ್ನ 1 ರೂ. ಪ್ರಿ ಪೇಯ್ಡ್ ಪ್ಲಾನ್ ಅನ್ನು ಸದ್ದಿಲ್ಲದೇ ಆರಂಭಿಸಿದೆ. ಇದರ ಮೂಲಕ ಬಳಕೆದಾರರು ಅತೀ ಅಗ್ಗದ ಪ್ರಿಪೇಯ್ಡ್ ಯೋಜನೆಯನ್ನು ಬಳಸಬಹುದು.

ಈ ಅಗ್ಗದ ಪ್ರಿಪೇಯ್ಡ್ ಯೋಜನೆ ಅತೀ ಹೆಚ್ಚು ಇಂಟರ್‌ನೆಟ್ ಬಳಕೆ ಮಾಡದೇ ಇರುವ ಜನರಿಗೆ ಉಪಯೋಗವಾಗಲಿದೆ. ಈ 1 ರೂ.ಯ ಯೋಜನೆ 100ಜಿಬಿ ಡೇಟಾದೊಂದಿಗೆ 30 ದಿನಗಳ ಮಾನ್ಯತೆಯನ್ನು ಹೊಂದಿರುತ್ತದೆ.

ಈ ಯೋಜನೆ ಮೈಜಿಯೋ ಅಪ್ಲಿಕೇಶನ್‌ನಲ್ಲಿ ಗೋಚರವಾಗುತ್ತಿದ್ದು, ಸದ್ಯ ಯಾವುದೇ ವೆಬ್‌ಸೈಟ್‌ನಲ್ಲಿ ತೋರಿಸುತ್ತಿಲ್ಲ. ಜಿಯೋವಿನ 1 ರೂ.ಯ ಪ್ರಿಪೇಯ್ಡ್ ಯೋಜನೆ 64 ಕೆಬಿಪಿಎಸ್ ಇಂಟರ್‌ನೆಟ್ ಸ್ಪೀಡ್ ಅನ್ನು ಹೊಂದಿರುತ್ತದೆ. ಇದನ್ನೂ ಓದಿ: ಹೇಳದೇ ಕೇಳದೇ ನಾಯಕ ಪಟ್ಟದಿಂದ ತೆಗೆದ್ರು – ಮೌನ ಮುರಿದ ಕೊಹ್ಲಿ

ಜಿಯೋ ಹೊರತು ಪಡಿಸಿ ಭಾರತದಲ್ಲಿ ಇತರ ನೆಟ್‌ವರ್ಕ್ಗಳು ಇಷ್ಟೊಂದು ಕಡಿಮೆ ಬೆಲೆಗೆ ಯಾವುದೇ ಯೋಜನೆಯನ್ನು ನೀಡುತ್ತಿಲ್ಲ. ಹೀಗಾಗಿ ಅಗತ್ಯಕ್ಕಿತ ಹೆಚ್ಚಿನ ಡೇಟಾವನ್ನು ಖರೀದಿಸಲು ಬಯಸದ ಬಳಕೆದಾರರಿಗೆ ಈ ಯೋಜನೆ ಉಪಯೋಗವಾಗಲಿದೆ. ಆದರೆ ಈ ಯೋಜನೆಯನ್ನು ಒಂದು ತಿಂಗಳಿನಲ್ಲಿ ಎಷ್ಟು ಬಾರಿ ಬಳಸಬಹುದು ಎಂಬ ಮಾಹಿತಿ ಲಭ್ಯವಿಲ್ಲ. ಇದನ್ನೂ ಓದಿ: ಬೆಂಗಳೂರಿನಲ್ಲಿ ಸಿದ್ಧವಾಗುತ್ತಿದೆ 150 ಕೆಜಿ ಹೊರಬಲ್ಲ ಡ್ರೋನ್

ಇದೇ ವಾರ ಜಿಯೋ ಸದ್ದಿಲ್ಲದೆ ಇನ್ನೊಂದು ಪ್ಲಾನ್ ಬಿಡುಗಡೆ ಮಾಡಿತ್ತು. 119 ರೂ.ಯ ಪ್ಲಾನ್ ದಿನಕ್ಕೆ 1.5 ಜಿಬಿಯ ಹೈ ಸ್ಪೀಡ್ ಡೇಟಾದೊಂದಿಗೆ ಅನಿಯಮಿತ ಕರೆ ಹಾಗೂ 300 ಎಸ್‌ಎಮ್‌ಎಸ್ ಹೊಂದಿದೆ. ಇದು 28 ದಿನಗಳ ವ್ಯಾಲಿಡಿಟಿಯನ್ನೂ ಹೊಂದಿದೆ. ಇದೇ ರೀತಿಯ 98 ರೂ.ಯ ಪ್ಲಾನ್ 14 ದಿನಗಳ ವರೆಗೆ ವ್ಯಾಲಿಡಿಟಿ ಹೊಂದಿದೆ.

Comments

Leave a Reply

Your email address will not be published. Required fields are marked *