ಕ್ರಿಕೆಟ್‌ ಪಂದ್ಯ ನಡೆಯುತ್ತಿದ್ದಾಗ ಪಾಕ್‌ ಸ್ಟೇಡಿಯಂನಲ್ಲಿ ಸ್ಫೋಟ – ಓರ್ವ ಸಾವು, ಹಲವರಿಗೆ ಗಾಯ

ಇಸ್ಲಾಮಾಬಾದ್‌: ಕ್ರಿಕೆಟ್‌ ಪಂದ್ಯ (Cricket Match) ನಡೆಯುತ್ತಿದ್ದಾಗಲೇ ಸ್ಟೇಡಿಯಂನಲ್ಲಿ (Stadium) ಸ್ಫೋಟ ಸಂಭವಿಸಿದ ಘಟನೆ ಪಾಕಿಸ್ತಾನದ (Pakistan) ವಾಯುವ್ಯ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ನಡೆದಿದೆ.

ಸ್ಫೋಟಕ್ಕೆ ಓರ್ವ ಬಲಿಯಾಗಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ. ಬಜೌರ್ ಜಿಲ್ಲೆಯ ಖಾರ್ ತೆಹ್ಸಿಲ್‌ನಲ್ಲಿರುವ ಕೌಸರ್ ಕ್ರಿಕೆಟ್ ಮೈದಾನದಲ್ಲಿ ಸ್ಫೋಟ ಸಂಭವಿಸಿದೆ.

ಬಜೌರ್ ಜಿಲ್ಲಾ ಪೊಲೀಸ್ ಅಧಿಕಾರಿ ವಕಾಸ್ ರಫೀಕ್ ಅವರು ಸುಧಾರಿತ ಸ್ಫೋಟಕ ಸಾಧನದ ಮೂಲಕ ಸ್ಫೋಟವನ್ನು ನಡೆಸಲಾಗಿದೆ ಎಂದು ಖಚಿತಪಡಿಸಿದ್ದಾರೆ. ಇದನ್ನೂ ಓದಿ: ಮೋದಿ ನನ್ನ ಒಳ್ಳೆಯ ಸ್ನೇಹಿತ: ಮತ್ತೆ ಯೂಟರ್ನ್ಹೊಡೆದ ಟ್ರಂಪ್

ಸ್ಫೋಟಗೊಂಡ ಬೆನ್ನಲ್ಲೇ ಪಂದ್ಯ ವೀಕ್ಷಿಸುತ್ತಿದ್ದ ಅಭಿಮಾನಿಗಳು ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ. ಮೈದಾನದಲ್ಲಿ ದಟ್ಟವಾದ ಹೊಗೆ ಏಳುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.