ಲಂಡನ್‌-ಸಿಂಗಾಪುರ ವಿಮಾನದಲ್ಲಿ ಪ್ರಕ್ಷುಬ್ಧತೆ; ಓರ್ವ ಸಾವು, 30 ಪ್ರಯಾಣಿಕರಿಗೆ ಗಾಯ

ಸಿಂಗಾಪುರ: ಲಂಡನ್‌ನಿಂದ ಬಂದ ಸಿಂಗಾಪುರ (London-Singapore Flight) ಏರ್‌ಲೈನ್ಸ್ ವಿಮಾನದಲ್ಲಿ ತೀವ್ರ ಪ್ರಕ್ಷುಬ್ಧತೆ ಉಂಟಾಗಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.

ಸಿಂಗಾಪುರಕ್ಕೆ ಹೋಗುತ್ತಿದ್ದ ಬೋಯಿಂಗ್ 777-300ER ಅನ್ನು ಬ್ಯಾಂಕಾಕ್‌ಗೆ ತಿರುಗಿಸಲಾಯಿತು. ಸ್ಥಳೀಯ ಕಾಲಮಾನ 15:45 ಕ್ಕೆ ಇಳಿಸಲಾಯಿತು. SQ 321 ವಿಮಾನವು ಒಟ್ಟು 211 ಪ್ರಯಾಣಿಕರು ಮತ್ತು 18 ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿತ್ತು ಎಂದು ಏರ್‌ಲೈನ್ ತಿಳಿಸಿದೆ. ಇದನ್ನೂ ಓದಿ: ಇರಾನ್ ಅಧ್ಯಕ್ಷರ ಸಾವಿನಲ್ಲಿ ನಮ್ಮ ಕೈವಾಡವಿಲ್ಲ: ಇಸ್ರೇಲ್‌ ಸ್ಪಷ್ಟನೆ

ಸಿಂಗಾಪುರ ಏರ್‌ಲೈನ್‌, ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದೆ. ಪ್ರಯಾಣಿಕರಿಗೆ ವೈದ್ಯಕೀಯ ನೆರವು ನೀಡಲು ಥಾಯ್ ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತಿದೆ. ಅಗತ್ಯವಿರುವ ಯಾವುದೇ ಹೆಚ್ಚುವರಿ ಸಹಾಯವನ್ನು ಒದಗಿಸಲು ಬ್ಯಾಂಕಾಕ್‌ಗೆ ತಂಡವನ್ನು ಕಳುಹಿಸಲಾಗುವುದು ಎಂದು ತಿಳಿಸಿದೆ.

ಥಾಯ್ ಅಧಿಕಾರಿಗಳು ಅಂಬುಲೆನ್ಸ್‌ ಮತ್ತು ತುರ್ತು ತಂಡಗಳನ್ನು ಸುವರ್ಣಭೂಮಿ ವಿಮಾನ ನಿಲ್ದಾಣಕ್ಕೆ ಕಳುಹಿಸಿದ್ದಾರೆ. ವಿಮಾನದಲ್ಲಿ ಏನಾಯಿತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇದನ್ನೂ ಓದಿ: ಜೂನ್ 28 ರಂದು ಇರಾನ್‌ನಲ್ಲಿ ಅಧ್ಯಕ್ಷೀಯ ಚುನಾವಣೆ