ಹಾಸನ| 1.49 ಕೋಟಿ ಹಣ ದುರುಪಯೋಗ ಆರೋಪ – ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಅಮಾನತು

ಹಾಸನ: ವಿವಿಧ ಯೋಜನೆಯಲ್ಲಿ 1.49 ಕೋಟಿ ಹಣ ದುರುಪಯೋಗಪಡಿಸಿಕೊಂಡ ಆರೋಪದಡಿ ಹಾಸನ (Hassan) ಜಿಲ್ಲೆ ಅರಕಲಗೂಡು (Arakalgud) ತಾಲೂಕಿನ ಕೊಣನೂರು (Konanur) ಗ್ರಾಮ ಪಂಚಾಯ್ತಿ ಕಾರ್ಯದರ್ಶಿಯನ್ನು ಅಮಾನತುಗೊಳಿಸಲಾಗಿದೆ.

ಬಿಎನ್ ಭುವನ್ ಅಮಾನತಾದ ಕಾರ್ಯದರ್ಶಿ. ಕೊಣನೂರು ಗ್ರಾ.ಪಂ. ಜೊತೆಗೆ ಗಂಗೂರು ಗ್ರಾ.ಪಂ. ಪ್ರಭಾರ ಕಾರ್ಯದರ್ಶಿಯಾಗಿದ್ದ (Gram Panchayat Secretary) ಬಿ.ಎನ್.ಭುವನ್ ಹದಿನೈದನೇ ಹಣಕಾಸು, ಗ್ರಾಮ ಪಂಚಾಯಿತಿ ಸ್ವಂತ ಸಂಪನ್ಮೂಲ, ಸಿಬ್ಬಂದಿ ವೇತನ ಖಾತೆ, ಗ್ರಾಮ ವಿಕಾಸ ಯೋಜನೆಯಲ್ಲಿ ಹಣ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಮುಡಾ ಕೇಸಲ್ಲಿ ಸಚಿವರಿಬ್ಬರ ಪಾತ್ರ ಇದ್ಯಾ? – ಮುಂದಿನ ವಾರವೇ ಸಿಎಂಗೆ ಇಡಿ ಸಮನ್ಸಾ?

ನಿಯಮಬಾಹಿರವಾಗಿ 1.49 ಕೋಟಿ ಹಣ ದುರುಪಯೋಗ ಮೇಲ್ನೋಟಕ್ಕೆ ಸಾಬೀತಾದ ಹಿನ್ನಲೆ ಇಲಾಖಾ ವಿಚಾರಣೆ ಕಾಯ್ದಿರಿಸಿ ಜಿಲ್ಲಾ ಪಂಚಾಯತ್ ಸಿಇಒ ಬಿಆರ್ ಪೂರ್ಣಿಮಾ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಅಲ್ಲದೇ ಸರ್ಕಾರದ ಹಣ ದುರುಪಯೋಗ ಮಾಡಿದ ಪ್ರಕರಣಗಳಲ್ಲಿ ನಿಯಮಾನುಸಾರ ಶಿಸ್ತುಕ್ರಮ ಜರುಗಿಸಲು ಕ್ರಮವಹಿಸುವಂತೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ 900 ಕೋಟಿ ಮೌಲ್ಯದ ಕೊಕೇನ್‌ ವಶ – ಇಬ್ಬರು ಅರೆಸ್ಟ್‌