ಹೋಮ್ ವರ್ಕ್ ಕಿರಿ ಕಿರಿ ತಪ್ಪಿಸಿಕೊಳ್ಳಲು ಅತ್ಯಾಚಾರದ ಕಥೆ ಹಣೆದ ವಿದ್ಯಾರ್ಥಿನಿ

ಕಾರವಾರ: ಶಾಲೆಯಲ್ಲಿ ಕೊಟ್ಟ ಹೋಮ್ ವರ್ಕ್ ನಿಂದ ತಪ್ಪಿಸಿಕೊಳ್ಳಲು ಪಾಲಕರ ಕಣ್ತಿಪ್ಪಿಸಿ ಕಾಡಿನಲ್ಲಿ ಅಡಗಿ ಕುಳಿ ವಿದ್ಯಾರ್ಥಿನಿ ಅತ್ಯಾಚಾರದ ನಾಟಕವಾಡಿದ್ದಾಳೆ. ವಿದ್ಯಾರ್ಥಿನಿಯ ಅಸಲಿಯತ್ತನ್ನು ಪೊಲೀಸರು ವೈದ್ಯಕೀಯ ಪರೀಕ್ಷೆ ನಡೆಸಿ ಬಯಲು ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ನಂದೊಳ್ಳಿಯಲ್ಲಿ ನಡೆದಿದೆ.

ಹತ್ತನೇ ತರಗತಿ ಓದುತಿದ್ದ ವಿದ್ಯಾರ್ಥಿನಿ ಶಾಲೆಯಲ್ಲಿ ನೀಡಿದ ಹೋಮ್ ವರ್ಕ ಸರಿಯಾಗಿ ಮಾಡುವುದಿಲ್ಲ ಎಂದು ಮುಖ್ಯ ಶಿಕ್ಷಕರು ಪಾಲಕರಿಗೆ ದೂರು ನೀಡಿದ್ದರು. ಹೀಗಾಗಿ ವಿದ್ಯಾರ್ಥಿನಿಯನ್ನ ಪಾಲಕರು ತರಾಟೆ ತೆಗೆದುಕೊಂಡಿದ್ದಾರೆ. ಇದರಿಂದ ತಪ್ಪಿಸಿಕೊಳ್ಳಲು ವಿದ್ಯಾರ್ಥಿನಿ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾಳೆ.

ಕೋಪಗೊಂಡ ವಿದ್ಯಾರ್ಥಿನಿ ಮನೆಯ ಹಿಂಭಾಗದಲ್ಲಿರುವ ಕಾಡಿನಲ್ಲಿ ಅವಿತು ಕುಳಿತಿದ್ದಳು. ಈ ವೇಳೆ ಮಗಳು ಕಾಣದಿದ್ದಾಗ ಪೋಷಕರು ಅಪಹರಣವಾಗಿರಬೇಕು ಎಂದು ಯಲ್ಲಾಪುರ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಈಕೆಗಾಗಿ ಮನೆಯ ಸುತ್ತಮುತ್ತ ಕಾಡಿನಲ್ಲಿ ಹುಡುಕಾಟ ನಡೆಸಿದ್ದರು. ಈ ವೇಳೆ ವಿದ್ಯಾರ್ಥಿನಿ ತಾನೇ ಕೈ ಕಾಲುಗಳಿಗೆ ಹಗ್ಗ ಸುತ್ತಿಕೊಂಡು ಅತ್ಯಾಚಾರದ ಕಥೆ ಹಣೆದಿದ್ದಾಳೆ.

ವಿದ್ಯಾರ್ಥಿನಿಯನ್ನು ಠಾಣೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಅತ್ಯಾಚಾರವಾಗಿಲ್ಲ ಎಂದು ವರದಿ ಬಂದಿದೆ. ಈ ವೇಳೆ ವಿದ್ಯಾರ್ಥಿನಿಯನ್ನು ವಿಚಾರಿಸಿದಾಗ ನಡೆಸಿದಾಗ ಈಕೆಯ ನಿಜವಾದ ಬಣ್ಣ ಬಯಲಾಗಿದೆ. ಘಟನೆ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *